ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೆಣ್ಣುಮಕ್ಕಳಿಗೆ ಮಾತ್ರವಲ್ಲ ಮನುಷ್ಯರಿಗೆ ಗಾಸಿಪ್ ಅನ್ನೋದು ಇಷ್ಟ. ಜನರ ಲೆವೆಲ್ ಬೇರೆ ಬೇರೆ ಇರುತ್ತದೆ ಅಷ್ಟೆ. ಅದರಲ್ಲಿಯೂ ಹೆಣ್ಣುಮಕ್ಕಳಿಗೆ ಗಾಸಿಪ್ ಮಾಡೋದು ಅಂದ್ರೆ ತುಂಬಾನೇ ಇಷ್ಟ. ಆದರೆ ಈ ಊರಿನಲ್ಲಿ ನೆಚ್ಚಿನ ಕೆಲಸವನ್ನು ಮಾಡುವಂತಿಲ್ಲ.
ಛತ್ತೀಸ್‌ಗಢದ ಬಾಲೋದ್ ಜಿಲ್ಲೆಯ ಮೆಡಕಿ ಗ್ರಾಮದಲ್ಲಿ ಈ ಸ್ಟ್ರಿಕ್ಟ್ ರೂಲ್ಸ್ ಬಂದಿದೆ.
ಸುಳ್ಳು ಸುದ್ದಿ ಹಾಗೂ ಗಾಸಿಪ್‌ನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಈ ರೀತಿ ಮಾಡಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಏನಾದ್ರೂ ವದಂತಿ ಹಬ್ಬಿಸಿರೋದು ಗೊತ್ತಾದರೆ ಐದು ಸಾವಿರ ರೂಪಾಯಿ ದಂಡ ಕಟ್ಟಬೇಕಾಗುತ್ತದೆ.
ಇನ್ನು ಯಾವುದಾದರೂ ವ್ಯಕ್ತಿಯ ಜೀವನಕ್ಕೆ ಧಕ್ಕೆ ತರುವಂಥ ಮಾತನಾಡಿದರೂ ಫೈನ್ ತಪ್ಪಿದ್ದಲ್ಲ. ಗ್ರಾಮದ ಪ್ರವೇಶದ್ವಾರ ಹಾಗೂ ಪ್ರಮುಖ ಸ್ಥಳಗಳಲ್ಲಿ ಈ ನಿಯಮದ ಕುರಿತು ಬೋರ್ಡ್‌ಗಳನ್ನು ಹಾಕಲಾಗಿದೆ. ವದಂತಿ ಹಬ್ಬಿಸುವವರ ಬಗ್ಗೆ ಮಾಹಿತಿ ನೀಡಿದವರಿಗೆ 501 ರೂ. ಬಹುಮಾನ ನೀಡಿ, ಅವರ ಹೆಸರನ್ನು ಗೌಪ್ಯವಾಗಿ ಇಡಲಾಗುತ್ತದೆ. ದಂಡದಿಂದ ಸಂಗ್ರಹವಾದ ಹಣವನ್ನು ಗ್ರಾಮದ ಅಭಿವೃದ್ಧಿ ಮತ್ತು ಬಡವರ ಸಹಾಯಕ್ಕೆ ಬಳಸಲಾಗುತ್ತದೆ ಎನ್ನಲಾಗಿದೆ.



