ಏನಾದ್ರು ಸಮಸ್ಯೆಗೆ ಸಿಲುಕಿದ್ದೀರಾ? ನೇರ ಪ್ರಧಾನಿ ಮೋದಿಗೆ ದೂರು ಸಲ್ಲಿಸಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸರ್ಕಾರಿ ಕಚೇರಿಗಳಲ್ಲಿ ನಿಮ್ಮ ಅಹವಾಲುಗಳನ್ನು ಸ್ವೀಕರಿಸುತ್ತಿಲ್ವಾ? ಸ್ವೀಕರಿಸಿದ್ರೂ ಯಾವುದೇ ಪ್ರಯೋಜನ ಆಗಿಲ್ವಾ? ಹಾಗಿದ್ರೆ ಒಂದು ಕೆಲಸ ಮಾಡಿ, ನೇರ ಪ್ರಧಾನಿ ಮೋದಿ ಅವರಿಗೇ ದೂರು ಸಲ್ಲಿಸಿಬಿಡಿ!

ಹೌದು, ಆನ್‌ಲೈನ್‌ನಲ್ಲಿ ಪ್ರಧಾನಿ ಮೋದಿಗೆ ದೂರು ಸಲ್ಲಿಸಿದರೆ, ಸೂಕ್ತ ಕ್ರಮ ಕೈಗೊಳ್ಳುತ್ತಾರೆ. ಜೊತೆಗೆ ಭವಿಷ್ಯದಲ್ಲಿ ಇಂಥ ಸಮಸ್ಯೆ ಬಾರದಂತೆ ತಡೆಯುತ್ತಾರೆ.

ಅರ್ಜಿ ಸಲ್ಲಿಸೋದು ಹೇಗೆ?
ಪ್ರಧಾನ ಮಂತ್ರಿಗಳ ಕಚೇರಿಗೆ ದೂರು ಸಲ್ಲಿಸಲು ವೆಬ್‌ಸೈಟ್ ಒಂದನ್ನು ಕ್ರಿಯೇಟ್ ಮಾಡಲಾಗಿದೆ. https://www.pmindia.gov.in/en/interact-with-honble-pm/ ಇಲ್ಲಿ ನೀವು ದೂರನ್ನು ನೊಂದಾಯಿಸಿ. ಸಮಸ್ಯೆಯ ದಾಖಲೆ, ನಿಮ್ಮ ವಿವರ ಎಲ್ಲನ್ನೂ ನೀಡಬಹುದಾಗಿದೆ.

ಇದರ ಜೊತೆಗೆ ಲಿಖಿತ ರೂಪದಲ್ಲಿ ಪ್ರಧಾನಿ ಕಚೇರಿಗೆ ಪತ್ರ ಬರೆಯಬಹುದಾಗಿದೆ. ಪ್ರಧಾನಿ ಕಚೇರಿ, ಸೌತ್ ಬ್ಲಾಕ್, ನವದೆಹಲಿ, ಪಿನ್ 110011 ಗೆ ದೂರು ಪತ್ರವನ್ನು ಬರೆಯಬೇಕು. ಇದಲ್ಲದೆ, ನೀವು ನಿಮ್ಮ ದೂರನ್ನು ಫ್ಯಾಕ್ಸ್ ಮೂಲಕ FAX ನಂ. ನೀವು ಅದನ್ನು ಪ್ರಧಾನ ಮಂತ್ರಿಗಳ ಕಚೇರಿಗೆ 011-23016857 ಸಂಖ್ಯೆಗೆ ಕಳುಹಿಸಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!