ಹೊಸದಿಗಂತ ಡಿಜಿಟಲ್ ಡೆಸ್ಕ್:
ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸುವುದು ಅಸಾಧ್ಯ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಭ್ರಷ್ಟಾಚಾರ ಕುರಿತಾದ ಪ್ರಶ್ನೆಗೆ ಉತ್ತರಿಸುತ್ತಾ, ಭ್ರಷ್ಟಾಚಾರ ಇಲ್ಲ ಅಂತ ಯಾರು ಹೇಳಿದ್ದು? ಭ್ರಷ್ಟಾಚಾರ ಇಲ್ಲದ ಆಡಳಿತ ಎಲ್ಲೂ ಇಲ್ಲ. ಇದು ಮುಕ್ತವಾಗುವುದು ಸುಲಭದ ಮಾತಲ್ಲ, ಇದು ಅಸಾಧ್ಯ. ಯಾವುದೇ ಕಡೆ ಹೋದರೂ ಭ್ರಷ್ಟಾಚಾರ ಇದ್ದೇ ಇರುತ್ತವೆ. ಆದರೆ ಅವರನ್ನು ಹುಡುಕಿ ಶಿಕ್ಷೆ ನೀಡಬೇಕು ಎಂದು ಹೇಳಿದ್ದಾರೆ.
ಇನ್ನು ಲೋಕಸಭೆ ಚುನಾವಣೆ ಟಿಕೆಟ್ ಬಗ್ಗೆ ಮಾತನಾಡಿ, ಇನ್ನೇನು ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ ಮಾಡುತ್ತೇವೆ ಎಂದು ಹೇಳಿದ್ದಾರೆ.