ಸರ್ಕಾರ- ರಾಜ್ಯಪಾಲರ ತಿಕ್ಕಾಟ: ಭಾಷಣ ಓದದೇ ಸದನದಿಂದ ಹೊರನಡೆದ ಗವರ್ನರ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡು ಸರ್ಕಾರ ಹಾಗೂ ರಾಜ್ಯಪಾಲರ ನಡುವಿನ ಶೀತಲ ಸಮರ ಹೆಚ್ಚುತ್ತಲ್ಲೇ ಇದ್ದು, ಇಂದು ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಓದದೇ ತಮಿಳುನಾಡು ರಾಜ್ಯಪಾಲರು ವಿಧಾನಸಭೆ ಕಲಾಪದಿಂದ ಹೊರ ನಡೆದಿದ್ದಾರೆ.

ಮಿಳುನಾಡು ವಿಧಾನಸಭೆಯ ಕಲಾಪ ಇಂದು ಆರಂಭವಾಗಿದ್ದು, ಕಲಾಪಕ್ಕೆ ಬಂದ ತಮಿಳುನಾಡು ಗವರ್ನರ್ ಎಂ. ಎನ್. ರವಿ ಅವರು ರಾಜ್ಯದ ಗವರ್ನರ್ ಆಗಿ ಮಾಡಬೇಕಿದ್ದ ಸಂಪ್ರದಾಯಿಕ ಭಾಷಣವನ್ನು ಮಾಡದೇ ಸದನದಿಂದ ಹೊರ ನಡೆದಿದ್ದಾರೆ.

ರಾಜ್ಯಪಾಲರ ಭಾಷಣ ವಾಡಿಕೆಯಂತೆ ರಾಜ್ಯ ಸರ್ಕಾರದ ಕೆಲ ಯೋಜನೆಗಳು ಹಾಗೂ ಕಾರ್ಯವೈಖರಿ ಹಾಗೂ ಕಲಾಪದ ಆಜೆಂಡಾನ್ನು ಹೊಂದಿತ್ತು. ಸಂಪ್ರದಾಯದಂತೆ ತಮಿಳುನಾಡು ಸರ್ಕಾರ ಸಿದ್ಧಪಡಿಸಿದ ಈ ಭಾಷಣದ ಭಾಷಾಂತರವನ್ನು ರಾಜ್ಯಪಾಲರು ಓದಬೇಕಿತ್ತು. ನಂತರ ರಾಜ್ಯ ಸರ್ಕಾರವು ತನ್ನ ಕಾರ್ಯವನ್ನು ಪರಿಶೀಲಿಸಿದ ಮತ್ತು ಅಧಿವೇಶನದ ಕಾರ್ಯಸೂಚಿಯನ್ನು ರೂಪಿಸಿದ ಈ ಭಾಷಣದ ಅನುವಾದವನ್ನು ತಮಿಳುನಾಡು ಸ್ಪೀಕರ್ ಎಂ.ಅಪ್ಪಾವು ಅವರು ಓದಿದರು. ಆದರೆ ರಾಜ್ಯಪಾಲರು ಭಾಷಣದ ಕೊನೆಯಲ್ಲಿ ರಾಷ್ಟ್ರಗೀತೆಗೂ ಕಾಯದೆ ಗದ್ದಲದಿಂದ ಕೂಡಿದ ಸದನದಿಂದ ಸೀದಾ ಹೊರ ನಡೆದರು.

ಡಿಎಂಕೆಯ ಹಿರಿಯ ಸಚಿವ ದುರೈ ಮುರುಗನ್ ಅವರು ಸರ್ಕಾರದ ಬಗ್ಗೆ ರಾಜ್ಯಪಾಲರ ಟೀಕೆಗಳನ್ನು ದಾಖಲಿಸಬಾರದು ಎಂಬ ನಿರ್ಣಯವನ್ನು ಸದನದಲ್ಲಿ ಮಂಡಿಸಿದಾಗ ರಾಜ್ಯಪಾಲರು ಸದನದಿಂದ ಹೊರನಡೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!