ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಇಂದು ನವದೆಹಲಿಯ ಕರ್ತವ್ಯ ಪಥದಲ್ಲಿ ಕರ್ತವ್ಯ ಭವನವನ್ನು ಉದ್ಘಾಟಿಸಿದರು. ಕೇಂದ್ರ ಸರ್ಕಾರವು ಕೇವಲ ಸಚಿವಾಲಯಗಳ ಬಾಡಿಗೆಗೆ 1,500 ಕೋಟಿ ರೂ. ಖರ್ಚು ಮಾಡುತ್ತಿದೆ, ಇನ್ನುಮುಂದೆ ಈ ವೆಚ್ಚಕ್ಕೆ ಕಡಿವಾಣ ಬೀಳಲಿದೆ ಎಂದು ಹೇಳಿದ್ದಾರೆ.
“ಇಷ್ಟು ದೊಡ್ಡ ಗಾತ್ರದ, ಇಷ್ಟು ವೆಚ್ಚದ ಕಟ್ಟಡ ನಿರ್ಮಾಣದ ಅಗತ್ಯವಿತ್ತಾ? ಎಂದು ಹಲವರು ಪ್ರಶ್ನಿಸಬಹುದು. ಆದರೆ, ಭಾರತ ಸರ್ಕಾರದ ಅನೇಕ ಸಚಿವಾಲಯಗಳನ್ನು ದೆಹಲಿಯ 50 ವಿಭಿನ್ನ ಸ್ಥಳಗಳಿಂದ ನಡೆಸಲಾಗುತ್ತಿದೆ. ಈ ಸಚಿವಾಲಯಗಳಲ್ಲಿ ಹೆಚ್ಚಿನವು ಬಾಡಿಗೆ ಕಟ್ಟಡಗಳಿಂದ ನಡೆಸಲ್ಪಡುತ್ತಿವೆ. ಅದಕ್ಕೆ ವಾರ್ಷಿಕ ಒಂದೂವರೆ ಸಾವಿರ ಕೋಟಿ ರೂ. ವೆಚ್ಚವಾಗುತ್ತಿದೆ. ಇಷ್ಟು ದೊಡ್ಡ ಮೊತ್ತವನ್ನು ಕೇಂದ್ರ ಸರ್ಕಾರವು ಕೇವಲ ಬಾಡಿಗೆ ಪಾವತಿಸಲು ಖರ್ಚು ಮಾಡುತ್ತಿದೆ” ಎಂದು ಮೋದಿ ತಿಳಿಸಿದ್ದಾರೆ.