SHOCKING | ಹೆಂಡತಿಗೆ ಸರ್ಕಾರಿ ನೌಕರಿ: ಹೊಟ್ಟೆಉರಿಗೆ ಪತ್ನಿಗೆ ಮಚ್ಚುಬೀಸಿದ ಪತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪತ್ನಿಯ ಸರ್ಕಾರಿ ನೌಕರಿ ವಿಷಯಕ್ಕೆ ಹೊಟ್ಟೆ ಉರಿದುಕೊಂಡ ಪತಿ ನಡು ರಸ್ತೆಯಲ್ಲೇ ಆಕೆಯನ್ನು ಮಚ್ಚಿನಿಂದ ಕೊಚ್ಚಿದ್ದಾನೆ.

ಬೇಲೂರಪ್ಪ ತನ್ನ ಪತ್ನಿಯ ಸಂಬಳ ಹೆಚ್ಚಾಗಿದ್ದಕ್ಕೆ ಹೊಟ್ಟೆ ಉರಿದುಕೊಂಡ ಪತಿ. ಪತ್ನಿ ತನಗಿಂತ ಹೆಚ್ಚು ದುಡಿಯುತ್ತಿದ್ದಾಳೆ  ಹಾಗೂ ದುಡ್ಡಿನ ಮತ್ತು ಏರಿದೆ ಎಂದು ಸಿಟ್ಟಿಗೆದ್ದ ಪತಿ ಆಕೆ ಕೆಲಸಕ್ಕೆ ಹೋಗುವ ವೇಳೆ ಮಚ್ಚನ್ನು ಬೀಸಿ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.

ಸದ್ಯ ಗಂಭೀರವಾಗಿ ಗಾಯಗೊಂಡ ಪತ್ನಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೇಲೂರಪ್ಪನ ಪೋಷಕರು ಉಂಡಾಡಿ ಗುಂಡನಂತಿದ್ದ ಎನ್ನುವ ಕಾರಣಕ್ಕೆ ಮದುವೆ ಮಾಡಿದ್ದರು. ಆದರೆ ಮದುವೆ ನಂತರವೂ ಕೆಟ್ಟ ಬುದ್ಧಿ ತೋರಿದ್ದಕ್ಕೆ ಮಗನನ್ನು ಗಲ್ಲಿಗೇರಿಸಿ ಎಂದು ಕಣ್ಣೀರಿಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!