ಈ ವೈದ್ಯನಿಗೆ ಉಕ್ರೇನಿನಿಂದ ಚಿರತೆ ತರೋಕೂ ಭಾರತ ಸರ್ಕಾರ ಸಹಾಯ ಮಾಡ್ಬೇಕಂತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಭಾರತ ಸರ್ಕಾರ ಧಾವಿಸಿದ್ದು, ತಾಯ್ನಾಡಿಗೆ ಜನರನ್ನು ಸುರಕ್ಷಿತವಾಗಿ ಕರೆತರುತ್ತಿದೆ. ಈ ಮಧ್ಯೆ ಉಕ್ರೇನ್‌ನಲ್ಲಿರುವ ಭಾರತೀಯ ವೈದ್ಯನೊಬ್ಬ ನನ್ನನ್ನು ಕರೆದುಕೊಂಡು ಹೋಗುವ ಜೊತೆ ನನ್ನ ಚಿರತೆಯನ್ನೂ ಕರೆದುಕೊಂಡು ಹೋಗಲು ವ್ಯವಸ್ಥೆ ಮಾಡಿ ಎಂದು ಪಟ್ಟುಹಿಡಿದು ಕೂತಿದ್ದಾನೆ.

ಎಷ್ಟೋ ದೇಶಗಳು ಉಕ್ರೇನ್‌ನಲ್ಲಿ ಸಿಲುಕಿರೋ ತನ್ನ ಪ್ರಜೆಗಳ ಕೈ ಬಿಟ್ಟಿರುವಾಗ ಭಾರತ ಜನರನ್ನು ತಾಯ್ನಾಡಿಗೆ ಕರೆತರಲು ಎಲ್ಲ ರೀತಿ ಪ್ರಯತ್ನ ಮಾಡುತ್ತಿದೆ ಹಾಗೂ ಯಶಸ್ವಿ ಕೂಡ ಆಗಿದೆ. ಆದರೆ ಜಾಗ್ವಾರ್ ಕುಮಾರ್ ಎಂದೇ ಪ್ರಸಿದ್ಧಿ ಪಡೆದಿರುವ ವೈದ್ಯ ಗಿರೀಶ್‌ಕುಮಾರ್ ತನ್ನ ಚಿರತೆ ಬರೋತನಕ ನಾನು ಭಾರತಕ್ಕೆ ಮರಳೋದಿಲ್ಲ ಎಂದು ಕುಳಿತಿದ್ದಾನೆ.

ಅಷ್ಟೇ ಅಲ್ಲದೆ ನಾನು ರಾಯಭಾರ ಕಚೇರಿಗೆ ಕರೆ ಮಾಡಿದೆ, ನನ್ನ ಚಿರತೆ ಸ್ಥಳಾಂತರದ ಬಗ್ಗೆ ಯಾರೂ ಸರಿಯಾಗಿ ಪ್ರತಿಕ್ರಿಯೆ ನೀಡಿಲ್ಲ, ನನ್ನ ಸುತ್ತಮುತ್ತ ರಷ್ಯನ್ಸ್ ಇದ್ದಾರೆ. ಪರಿಸ್ಥಿತಿ ಕೈಮೀರುತ್ತಿದೆ. ನನ್ನ ಮಕ್ಕಳಂತೆ ಈ ಪ್ರಾಣಿಗಳನ್ನು ನೋಡಿಕೊಂಡಿದ್ದೇನೆ. ಇವುಗಳ ಜೊತೆಯೇ ಉಕ್ರೇನ್ ತೊರೆಯುತ್ತೇನೆ ಎಂದಿದ್ದಾರೆ.

ಇಂಥ ಪರಿಸ್ಥಿತಿಯಲ್ಲಿ ಈ ರೀತಿ ಮಾತನಾಡುತ್ತಿರುವ ವೈದ್ಯನಿಗೆ ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್‌ಗಳ ಮೂಲಕ ಜನ ಬಿಸಿ ಕಾಯಿಸಿದ್ದಾರೆ. ಪ್ರಾಣಿಗಳ ಜತೆ ವಿಡಿಯೋ ಮಾಡಿ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿ ಸಾಕಷ್ಟು ಹಣ ಗಳಿಸೋ ಕಾರಣ ಹೀಗೆ ಮಾಡುತ್ತಿದ್ದಾರೆ ಎಂದಿದ್ದಾರೆ.
ಬೇರೆ ದೇಶದ ಸರ್ಕಾರ ತನ್ನ ಪ್ರಜೆಗಳ ಕಡೆ ಕಿರುಗಣ್ಣಿನಲ್ಲಿಯೂ ನೋಡುತ್ತಿಲ್ಲ. ಆದರೆ ನಮ್ಮ ಸರ್ಕಾರ ಇಷ್ಟು ಮಾಡಿದರೂ ಇವರಿಗೆ ಸಮಾಧಾನ ಇಲ್ಲ ಎಂದು ಪ್ರತ್ಯುತ್ತರ ನೀಡಿದ್ದಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!