Saturday, February 4, 2023

Latest Posts

ರಾಜ್ಯಪಾಲ ದೇವವ್ರತ್ ವಿಶೇಷ ಕಾಳಜಿ: ಸ್ವಚ್ಛವಾಗುತ್ತಿದೆ ಗುಜರಾತ್ ವಿದ್ಯಾಪೀಠ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಗುಜರಾತ್ ವಿದ್ಯಾಪೀಠದ ಆವರಣದಲ್ಲಿ ರಾಜ್ಯಪಾಲ ಆಚಾರ್ಯ ದೇವವ್ರತ್ ಸ್ವಚ್ಛತಾ ಅಭಿಯಾನವನ್ನು ಆರಂಭಿಸಿದ್ದಾರೆ. ಈ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಆದರ್ಶಗಳನ್ನು ಆಧರಿಸಿ ಈ ಅಭಿಯಾನ ನಡೆಯುತ್ತಿದ್ದು, ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಸಹಾಯದಿಂದ 20 ಕ್ಕೂ ಹೆಚ್ಚು ಟ್ರಕ್‌ಗಳ ಕಸವನ್ನು ತೆಗೆದುಹಾಕಲಾಯಿತು.

ಸ್ಥಳವನ್ನು ಸ್ವಚ್ಛಗೊಳಿಸಿ ಮರುದಿನ ಹೂವಿನ ಗಿಡಗಳನ್ನು ನೆಡಲಾಗಿದೆ.ದೇವವ್ರತ್ ಅವರು ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡ ನಂತರ ಗುಜರಾತ್ ವಿದ್ಯಾಪೀಠದ ಸ್ವಚ್ಛತೆಗೆ ವಿಶೇಷವಾಗಿಆದ್ಯತೆ ನೀಡಿದ್ದಾರೆ.

1,400 ವಿದ್ಯಾರ್ಥಿಗಳು ವಾಸಿಸುವ ಮತ್ತು ಅಧ್ಯಯನ ಮಾಡುವ ಗುಜರಾತ್ ವಿದ್ಯಾಪೀಠದ ಆಟದ ಮೈದಾನದಲ್ಲಿ ತ್ಯಾಜ್ಯದ ರಾಶಿಗಳು ತೊಂದರೆಯುಂಟು ಮಾಡುತ್ತವೆ ಎಂದು ಅವರು ಹೇಳಿದ್ದಾರೆ. ವಿದ್ಯಾಪೀಠದ ಕಟ್ಟಡಗಳ ಮೇಲೆ ಬೆಳೆದಿರುವ ಗಿಡ-ಮರಗಳಿಂದ ಆಗುತ್ತಿರುವ ಹಾನಿಯ ಬಗ್ಗೆಯೂ ರಾಜ್ಯಪಾಲರು ಗಮನ ಸೆಳೆದಿದ್ದಾರೆ.

ರಾಜ್ಯಪಾಲರ ಮಧ್ಯಪ್ರವೇಶ ನಡೆಸಿ 10 ಮಂದಿ ಪೌರ ಕಾರ್ಮಿಕರು, ಜೆಸಿಬಿ ಯಂತ್ರ, ಮೂರು ಡಂಪರ್‌ಗಳು, ಹೈಡ್ರಾಲಿಕ್ ಜಾಕ್ ಟ್ರಾಲಿ, ಟ್ಯಾಂಕರ್‌ಗಳು, ಟ್ರ್ಯಾಕ್ಟರ್‌ಗಳು ಮತ್ತು 15 ಮಂದಿ ತೋಟದ ಕಾರ್ಮಿಕರ ಸಹಾಯದಿಂದ ಇದೀಗ ಗುಜರಾತ್ ವಿದ್ಯಾಪೀಠದ ಆವರಣವನ್ನು ಸ್ವಚ್ಛಗೊಳಿಸಲಾಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!