ಉಪವಾಸ ಅಂತ್ಯಗೊಳಿಸಲು ಏನಾದರು ನೀಡುವುದಿದ್ದರೆ…. ಪ್ರಧಾನಿ ಮಾತು ಕೇಳಿ ಭಾವುಕರಾದ ಗೋವಿಂದ್ ದೇವ್ ಗಿರಿ ಮಹಾರಾಜ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಯೋದ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆಯಾಗಿ ಇದೀಗ ಸಾರ್ವಜನಿಕರ ದರ್ಶನಕ್ಕೂ ಮುಕ್ತವಾಗಿದೆ. ಶತ ಶತಮಾನಗಳ ಹೋರಾಟದ ಫಲವಾಗಿ ಭವ್ಯ ರಾಮ ಮಂದಿರದಲ್ಲಿ ಮತ್ತೆ ಪ್ರಭು ಶ್ರೀರಾಮ ವಿರಾಜಮಾನನಾಗಿದ್ದಾನೆ.

ಇತ್ತ ಬಾಲರಾಮನ ಪ್ರಾಣಪ್ರತಿಷ್ಠೆಗೆ ಪ್ರಧಾನಿ ನರೇಂದ್ರ ಮೋದಿ 11 ದಿನಗಳ ಕಠಿಣ ಉಪವಾಸ ವೃತ ಕೈಗೊಂಡಿದ್ದರು. ಪ್ರಾಣಪ್ರತಿಷ್ಠೆ ಬಳಿಕ ಸ್ವಾಮಿ ಗೋವಿಂದ್ ದೇವ್ ಗಿರಿ ಮಹಾರಾಜ್ ಸಮ್ಮುಖದಲ್ಲಿ ಪ್ರಧಾನಿ ಮೋದಿ ಉಪವಾಸ ಅಂತ್ಯಗೊಳಿಸಿದರು.

ಈ ಕುರಿತು ರೋಚಕ ಮಾಹಿತಿಯನ್ನು ಗೋವಿಂದ್ ದೇವ್ ಗಿರಿ ಹಂಚಿಗೊಂಡಿದ್ದಾರೆ.

ಗೋವಿಂದ್ ದೇವ್ ಗಿರಿ ಮಹಾರಾಜ್ ಹಾಗೂ ಇತರ ಹಿರಿಯ ಸ್ವಾಮೀಜಿಗಳು ಪ್ರಧಾನಿ ಮೋದಿಗೆ ಜೇನು ಹಾಗೂ ನಿಂಬೆ ರಸ ಮಿಶ್ರಿತ ನೀರು ನೀಡಲು ನಿರ್ಧರಿಸಿದ್ದರು. ಆದರೆ ಸ್ವಾಮಿ ಸ್ವಾಮಿ ಗೋವಿಂದ್ ದೇವ್ ಗಿರಿ ಮಹಾರಾಜ್‌ಗೆ ಮೋದಿ ವಿಶೇಷ ಮನವಿ ಮಾಡಿದ್ದರು. ನೀವು ನನ್ನ ಉಪವಾಸ ಅಂತ್ಯಗೊಳಿಸಲು ಏನಾದರು ನೀಡುತ್ತಿದ್ದರೆ ಅದು ರಾಮಲಲಾನ ಚರಣಾಮೃತ ನೀಡಿ ಎಂದು ಮನವಿ ಮಾಡಿದರು. ಆ ಬಳಿಕ ಶ್ರೀರಾಮಲಲಾ ಚರಣಗಳಿಗೆ ಮಾಡಿದ ಅಭಿಷೇಕ ಸ್ವೀಕರಿಸಿ ಮೋದಿಗೆ ತಮ್ಮ ಉಪವಾಸ ಅಂತ್ಯಗೊಳಿಸಿದರು.

ಶಾಸ್ತ್ರಗಳ ಪ್ರಕಾರ ಯಜಮಾನನ ಸ್ಥಾನದಲ್ಲಿ ನಿಂತು ಪ್ರಾಣಪ್ರತಿಷ್ಠೆ ನೆರವೇರಿಸಿದ ವ್ಯಕ್ತಿಗೆ ಹಿರಿಯರು ಅಥವಾ ಸ್ವಾಮೀಜಿಗಳ ಸಮ್ಮುಖದಲ್ಲಿ ಕೈಗೊಂಡ ಉಪವಾಸ, ವ್ರತಗಳನ್ನು ಅಂತ್ಯಗೊಳಿಸಲು ಹಾಲು ಅಥವಾ ಇತರ ಹಣ್ಣಿನ ರಸಗಳನ್ನು ನೀಡಲಾಗುತ್ತದೆ.ಹೀಗೆ ಪ್ರಧಾನಿ ಮೋದಿಯ ಕಠಿಣ ವೃತ ಅಂತ್ಯಗೊಳಿಸಲು ಸ್ವಾಮಿ ಗೋವಿಂದ್ ದೇವ್ ಗಿರಿ ಮಹಾರಾಜ್ ಹಾಗೂ ಇತರ ಸ್ವಾಮೀಜಿಗಳು ಜೇನು, ನಿಂಬೆ ರಸ ಮಿಶ್ರಿತ ನೀರು ನೀಡಲು ತಯಾರಿ ಮಾಡಿಕೊಂಡಿದ್ದರು. ಒಂದು ಲೋಟದಲ್ಲಿ ನಿಂಬೆ, ಜೇನು ಮಿಶ್ರಿತ ನೀರು ಕೂಡ ತಯಾರಿಸಲಾಗಿತ್ತು. ಈ ನೀರನ್ನು ಪ್ರಧಾನಿ ಮೋದಿ ಅಧಿಕಾರಿಗಳು, ವೈದ್ಯರ ತಂಡ ಕೂಡ ಪರಿಶೀಲನೆ ನಡೆಸಿತ್ತು.

ಆದ್ರೆ ಗರ್ಭಗುಡಿಯಿಂದ ಹೊರಬರುತ್ತಿದ್ದಂತೆ ಪ್ರಧಾನಿ ಮೋದಿ ನೇರವಾಗಿ ಸ್ವಾಮಿ ಗೋವಿಂದ್ ದೇವ್ ಗಿರಿ ಮಹಾರಾಜ್ ಬಳಿ ಒಂದು ಮನವಿ ಮಾಡಿದ್ದಾರೆ. ನನ್ನ ಉಪವಾಸ ವೃತ ಅಂತ್ಯಗೊಳಿಸಲು ನೀವು ಏನಾದರು ನೀಡುವುದಿದ್ದರೆ, ಬಾಲರಾಮನಿಗೆ ಅಭಿಷೇಖ ಮಾಡಿದ ಚರಣಾಮೃತ ನೀಡಿ ಎಂದಿದ್ದಾರೆ. ಈ ಮಾತುಗಳನ್ನು ಕೇಳಿದ ಸ್ವಾಮಿ ಗೋವಿಂದ್ ದೇವ್ ಗಿರಿ ಮಹಾರಾಜ್ ಸ್ವಾಮೀಜಿ ಮತ್ತಷ್ಟು ಭಾವುಕರಾದರು.

ಈ ಕುರಿತು ಮಾತನಾಡಿರುವ ಸ್ವಾಮಿ ಗೋವಿಂದ್ ದೇವ್ ಗಿರಿ ಮಹಾರಾಜ್, ನನ್ನ ಅಂತಃಕರಣದಲ್ಲಿ ಮಾತೃತ್ವ ಭಾವ ಮೂಡಿತ್ತು. ನನ್ನ ಮಗನ ಉಪವಾಸ ವೃತವನ್ನು ನಾನು ಅಂತ್ಯಗೊಳಿಸುವ ಭಾವನೆ ಮೂಡಿತ್ತು. ದೇವಸಂಭೂತನಾಗಿ ಅವತರಿಸಿ ಪ್ರಧಾನಿ ಎಂದು ಸ್ವಾಮಿ ಗೋವಿಂದ್ ದೇವ್ ಗಿರಿ ಮಹಾರಾಜ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!