ಮೀಸಲಾತಿ ತುಪ್ಪವನ್ನು ಸರ್ಕಾರ ತಲೆಗೆ ಸುರಿದಿದೆ, ಹಾಗಾಗಿ ಗೊತ್ತೆ ಆಗುತ್ತಿಲ್ಲ: ಬಸವಜಯ ಮೃತ್ಯುಂಜಯ ಶ್ರೀ

ಹೊಸದಿಗಂತ ವರದಿ,ವಿಜಯಪುರ:

ಮೀಸಲಾತಿ ತುಪ್ಪವನ್ನು ಸರ್ಕಾರ ಮೂಗಿಗೆ ಸುರಿದಿದ್ದರೆ, ವಾಸನೆಯಾದರೂ ನೋಡಬಹುದಿತ್ತು ಆದರೆ ಸರ್ಕಾರ ತಲೆಗೆ ತುಪ್ಪ ಸುರಿದಿದೆ ಹಾಗಾಗಿ ಗೊತ್ತೆ ಆಗುತ್ತಿಲ್ಲ ಅದು ಏನು ? ಎಂದು ಗೊತ್ತಾಗುತ್ತಿಲ್ಲ. ಪಂಚಮಸಾಲಿಗಳು ಗೊಂದಲದಲಿದ್ದೇವೆ ಎಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮಿಜಿ ಅಸಮದಾನ ವ್ಯಕ್ತಪಡಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಡಿ.29 ಕ್ಕೆ ಮೀಸಲಾತಿ ನೀಡಿದೆ. ಎಲ್ಲ ಲಿಂಗಾಯತರನ್ನು 2ಡಿ ಒಳಗೆ ಸೇರಿಸಿದೆ ಬಹಳ ಸಂತೋಷ ನಮ್ಮ ಹೋರಾಟದಿಂದ ಎಲ್ಲ ಪಂಚಮಸಾಲಿಗೂ ಒಳ್ಳೆಯದಾಗಿದೆ ನಾವು ಅದನ್ನು ಸ್ವಾಗತಿಸುತ್ತೇವೆ ಎಂದರು.

ಆದರೆ ನಿಜವಾದ ಹೋರಾಟ ಮಾಡಿದವರು ಪಂಚಮಸಾಲಿಗಳು ಕಳದೆ 2 ವರ್ಷದಿಂದ ಮನೆ- ಮಠಗಳನ್ನು ಬಿಟ್ಟು ಹೋರಾಟ ಮಾಡಿದ್ದೇವೆ. ನಮ್ಮ ಪಾಲು ಎಷ್ಟು ಎಂದು ಸ್ಪಷ್ಟತೆ ಇಲ್ಲ. ನಾವು ದಿಡಿದಿದ್ದಕ್ಕೆ ಸರ್ಕಾರ ಪ್ರತಿಫಲ ಕೊಡಲಿಲ್ಲ. ಪಂಚಮಸಾಲಿ ಸಮಾಜ ಗೊಂದಲದಲ್ಲಿದೆ. ಇನ್ನು 2 ದಿನಗಳಲ್ಲಿ ನಾವು ಬೆಳಗಾವಿಯಲ್ಲಿ ರಾಜ್ಯ ಮಟ್ಟದ ಪಂಚಮಸಾಲಿ ಕಾರ್ಯಕಾರಣಿ ಸಭೆಯನ್ನು ಕರೆಯುತ್ತೇವೆ. ಈ ಮೀಸಲಾತಿ ಸ್ವೀಕರಿಸಬೇಕೋ ಅಥವಾ ಬೇಡವೋ ಎಂಬುದರ ಬಗ್ಗೆ ಅಲ್ಲಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ ಎಂದರು.
ಇದಕ್ಕೂ ಮುನ್ನ ನಗರದ ಜ್ಞಾನಯೋಗಾಶ್ರಮಕ್ಕೆ ಭೇಟಿ ನೀಡಿ ಸಿದ್ಧೇಶ್ವರ ಶ್ರೀಗಳ ಆರೋಗ್ಯ ವಿಚಾರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!