ಚುನಾವಣೆ ದೃಷ್ಟಿಯಿಂದ ಸರ್ಕಾರಿ ಯೋಜನೆ ಜಾರಿಗೆ ತಂದಿದ್ದಾರೆ: ‘ಕೈ’ ವಿರುದ್ಧ ಜೋಶಿ ಕಿಡಿ

ಹೊಸದಿಗಂತ ಹುಬ್ಬಳ್ಳಿ:

ಮಹಾರಾಷ್ಟ್ರ ಹಾಗೂ ಜಾರ್ಖಾಂಡ್ ಚುನಾವಣೆಯ ಬಳಿಕ ರಾಜ್ಯದಲ್ಲಿ ಜಾರಿಗೆ ತಂದಿರುವ ಗ್ಯಾರಂಟಿ ತೆಗೆಯುವ ಯೋಚನೆಯಲ್ಲಿ ರಾಜ್ಯ ಸರ್ಕಾರವಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ಮಾತುಗಳು ಕೇಳಿದರೆ ಚುನಾವಣೆ ದೃಷ್ಟಿಯಿಂದ ಮಾತ್ರ ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದಾರೆ ಅನಿಸುತ್ತದೆ. ಖರ್ಗೆ ಅವರು ಹೇಳಿಕೆ ನೀಡಿದ್ದು, ಕಾಂಗ್ರೆಸ್ ನಲ್ಲಿ ಗೊಂದಲ ಸೃಷ್ಟಿಯಾಗಿದೆ ಎಂದರು.

ಖರ್ಗೆ ಅವರ ಹೇಳಿಕೆಯ ಶೈಲಿ ನೋಡಿದರೆ ಮಹಾರಾಷ್ಟ್ರ ಹಾಗೂ ಜಾರ್ಖಾಂಡ್ ಚುನವಣೆಯ ವರೆಗೂ ಸುಮ್ಮನಿರಿ ಅಂದ ಹಾಗೇ ಇದೆ. ಬಳಿಕ ತೆಗೆದು ಹಾಕಿ ಎಂಬ ಮಾನಸಿಕತೆಯಲ್ಲಿ ಅವರಿದ್ದಾರೆ. ಕಾಂಗ್ರೆಸ್ ಸುಳ್ಳು ಆಶ್ವಾಸನೆ ನೀಡುವ ಮೂಲಕ ರಾಜ್ಯವನ್ನು ಆರ್ಥಿಕವಾಗಿ ದಿವಾಳಿ ಮಾಡಲು ಯತ್ನಿಸಿದೆ ಎಂದು ಹರಿಹಾಯ್ದರು.

ಐದು ಗ್ಯಾರಂಟಿ ನಾವು ನೀಡಿದ್ದೇವೆ ಎಂದು ಹೇಳುತ್ತಿದ್ದಾರೆ. ಎಲ್ಲಿ ಪೂರೈಸಿದ್ದಾರೆ. ಯುವ ನಿಧಿ ಯೋಜನೆ 2023-24ರಲ್ಲಿ ಪದವಿ ಮುಗಿಸಿದ ಯಾವ ಯುವಕರಿಗೂ ನೀಡಿಲ್ಲ. ಕಾಂಗ್ರೆಸ್ ಎಂಥಹಾ ಕದಿಮರು ಅಂದರೆ ನಾವು ನೀಡುತ್ತಿದ್ದ 5ಕೆ.ಜಿ. ಅಕ್ಕಿಯನ್ನು ತಾವೇ ನೀಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಇಂತಹ ಕಳ್ಳರನ್ನು ಎಲ್ಲಿ ಹುಡುಕಿದರೂ ಸಿಗುವುದಿಲ್ಲ ಎಂದು ಕಿಡಿಕಾರಿದರು.

ಕಾಂಗ್ರೆಸ್ ಸುಳ್ಳು ಆಶ್ವಾಸನೆಗೆ ಕಿವಿಗೊಡದ ಜಮ್ಮು ಕಾಶ್ಮೀರ ಹಾಗೂ ಹರಿಯಾಣ ಜನರು ಅವರನ್ನು ಕಡೆಗಣಿಸಿದರು. ಅದೇ ರೀತಿ ಮಹರಾಷ್ಟ್ರ ಹಾಗೂ ಜಾರ್ಖಾಂಡನಲ್ಲಿ ಕಿತ್ತೆಸೆಯುತ್ತಾರೆ. ಆಮ್ ಆದ್ಮಿ ಪಕ್ಷ ಕಾಂಗ್ರೆಸ್ ಅನ್ನು ಅನೇಕ ರಾಜ್ಯದಲ್ಲಿ ತೆಗೆದು ಹಾಕಿದೆ. ದೆಹಲಿಯಲ್ಲಿ ಕಾಂಗ್ರೆಸ್ ಶೂನ್ಯವಾಗಿದೆ ಎಂದು ತಿಳಿಸಿದರು.

ಸಚಿವ ಜಮೀರ್ ಅಹ್ಮದ್ ಖಾನ್ ಒಬ್ಬ ಮತಾಂಧ ಶಕ್ತಿ ಅವರ ಹೇಳಿಕೆಯಿಂದ ಹಾವೇರಿಯಲ್ಲಿ ಕಲ್ಲು ತೂರಾಟದಂತಹ ಗಂಭೀರ ವಿದ್ಯಮಾನಗಳು ನಡೆದವು. ರಾಜಕೀಯ ವ್ಯಕ್ತಿಗಳು ಅನಕೃತ ಆದೇಶವನ್ನು ಪಾಲನೆ ಮಾಡುವ ಅಕಾರಿಗಳಿಗೆ ಕನಿಷ್ಠ ಜ್ಞಾನವೂ ಇಲ್ವಾ?. ಪ್ರತಿಯೊಬ್ಬ ಅಧಿಕಾರಿ ಇದಕ್ಕೆ ಉತ್ತರ ನೀಡುವ ಪರಿಸ್ಥಿತಿ ಬರಲಿದೆ ಎಂದು ಜೋಶಿ ಎಚ್ಚರಿಕೆ ನೀಡಿದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!