ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಚುನಾವಣೆಯಲ್ಲಿ ಆ ಒಂದು ಸಮುದಾಯವನ್ನ ಕಡೆಗಣಿಸಬಾರದು, ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು ಅಂತ ಪ್ರಯತ್ನ ಮಾಡಿದ್ವಿ, ಆದರೆ ನಮ್ಮ ಅವಶ್ಯಕತೆ ಅವರಿಗೆ ಇಲ್ಲ, ಎಂದು ನಿಖಿಲ್ ಕುಮಾರಸ್ವಾಮಿ ವಿಷಾದ ಹೊರಹಾಕಿದ್ದಾರೆ.
ದೇವೇಗೌಡ್ರು ರಾಜಕೀಯ ನಿವೃತ್ತಿ ಘೋಷಿಸಲಿ ಎಂಬ ಸಿಪಿವೈ ಹೇಳಿಕೆಗೆ ಪ್ರತಿಕ್ರಿಯಿಸಿದ ನಿಖಿಲ್, ಅಧಿಕಾರಕ್ಕಾಗಿ ದೇವೇಗೌಡ್ರು ರಾಜಕೀಯ ಮಾಡ್ತಿಲ್ಲ. ಅವರಿಗೆ 92 ವರ್ಷ, ದೇಶ ಮತ್ತು ರಾಜ್ಯವನ್ನು ಕಟ್ಟಲು ಅವರ ನಾಯಕತ್ವ ನಮಗೆ ಬೇಕು ಎಂದು ಸ್ವತಃ ಪ್ರಧಾನಿಯವರೇ ಆಗಾಗ ಹೇಳುತ್ತಿದ್ದರು.
ಇಲ್ಲಿ ದೇವೇಗೌಡರು ಅಧಿಕಾರಕ್ಕೆ ಅಂಟಿಕೊಂಡು ರಾಜಕೀಯ ಮಾಡುತ್ತಿಲ್ಲ. ಕಳೆದ 62 ವರ್ಷಗಳ ಪ್ರಾಮಾಣಿಕ ರಾಜಕೀಯ ಜೀವನದಲ್ಲಿ ಅವರಿಗೆ ಏನೂ ಬೇಕಾಗಿಲ್ಲ. ಅವರು ರಾಜೀನಾಮೆ ನೀಡಬೇಕೇ? ಮುಂದುವರಿಯಬೇಕೆ ಎಂದು ರಾಜ್ಯದ ಜನತೆ ನಿರ್ಧರಿಸಲಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.