ಟೋಕಿಯೋ ಶೃಂಗಸಭೆಯಲ್ಲಿ ಮಹತ್ವದ ಘೋಷಣೆ:‌ ಸದಸ್ಯ ರಾಷ್ಟ್ರಗಳ ವಿದ್ಯಾರ್ಥಿಗಳಿಗೆ ʼಕ್ವಾಡ್ ಫೆಲೋಶಿಪ್ʼ ಪ್ರಾರಂಭ

ಹೊಸದಿಗಂತ ಜಿಜಿಟಲ್‌ ಡೆಸ್ಕ್‌
ಕ್ವಾಡ್‌ ಸದಸ್ಯ ರಾಷ್ಟ್ರಗಳ ಸಹಯೋಗದಲ್ಲಿ ಮಹತ್ವದ ಯೋಜನೆಯೊಂದಕ್ಕೆ ಜಪಾನ್‌ ನ ಟೋಕಿಯೋದಲ್ಲಿ ನಡೆಯುತ್ತಿರುವ ಶೃಂಗಸಭೆಯಲ್ಲಿ ಅಂಕಿತ ಬಿದ್ದಿದೆ.
ಕ್ವಾಡ್‌ ರಾಷ್ಟ್ರಗಳಾದ ಭಾರತ, ಆಸ್ಟ್ರೇಲಿಯಾ, ಜಪಾನ್ ಮತ್ತು ಅಮೇರಿಕಾ ದೇಶಗಳು ಪರಸ್ಪರ ಸಹಯೋಗದಲ್ಲಿ ʼಕ್ವಾಡ್ ಫೆಲೋಶಿಪ್ʼ ಅನ್ನು ಪ್ರಾರಂಭಿಸಿವೆ. ಈ ಯೋಜನೆಯನ್ವಯ ಕ್ವಾಡ್‌ ಸದಸ್ಯ ರಾಷ್ಟ್ರಗಳ ತಲಾ 100 ವಿದ್ಯಾರ್ಥಿಗಳ ಅಮೆರಿಕಾದಲ್ಲಿ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ ವಿಷಯಗಳಲ್ಲಿ ಪದವಿ ಅಧ್ಯಯಕ್ಕೆ ಪ್ರಾಯೋಜಕತ್ವ ನೀಡುತ್ತದೆ.
“ಈ ಫೆಲೋಶಿಪ್ ನಮ್ಮ ನಾಲ್ಕು ರಾಷ್ಟ್ರಗಳನ್ನು ಸಂಪರ್ಕಿಸುವ ಸೇತುವೆಯಾಗಲಿದೆ. ನಮ್ಮ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಬೆಳೆಯಲು ಅವಕಾಶ ಕಲ್ಪಿಸುತ್ತದೆ ಎಂದು ಎಂದು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಸಂತಸ ಹಂಚಿಕೊಂಡಿದ್ದಾರೆ.
ಜಪಾನ್‌ ಪ್ರಧಾನಿ ಕಿಶಿದಾ, ಭಾರತ ಪ್ರಧಾನಿ ನರೇಂದ್ರ ಮೋದಿ ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಮತ್ತು ಆಸ್ಟ್ರೇಲಿಯಾದ ಪಿಎಂ ಆಂಥೋನಿ ಅಲ್ಬನೀಸ್ ಕ್ವಾಡ್ ಈ ಯೋಜನೆಯನ್ನು ಅಧಿಕೃತವಾಗಿ ಉದ್ಘಾಟಿಸಿದರು.
ಕ್ವಾಡ್ ಫೆಲೋಶಿಪ್‌ ಯೋಜನೆ ಜಾರಿ ಸಾಧ್ಯವಾಗಿದ್ದಕ್ಕೆ ಕ್ವಾಡ್ ನಾಯಕರು ಹೆಮ್ಮೆಪಡುತ್ತಾರೆ. ಈ ಯೋಜನೆಯನ್ವಯ ತಲಾ 100 ಅಮೇರಿಕನ್, ಆಸ್ಟ್ರೇಲಿಯನ್, ಭಾರತೀಯ ಮತ್ತು ಜಪಾನೀಸ್ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ತಮ್ಮ ಆಯ್ಕೆಯ ಪದವಿ ಗಳಿಸಲು ಅಮೆರಿಕಾದಲ್ಲಿ ಅಧ್ಯಯನಿಸಲು ಎಲ್ಲಾ ರೀತಿಯ ಅನುಕೂಲಗಳನ್ನು ಕಲ್ಪಿಸುತ್ತದೆ” ಎಂದು ಅಮೆರಿಕದ ವೈಟ್ ಹೌಸ್ ಹೇಳಿಕೆಯಲ್ಲಿ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!