Wednesday, July 6, 2022

Latest Posts

ಸೇವಾ ಶುಲ್ಕ ವಸೂಲಿ: ರೆಸ್ಟೋರೆಂಟ್‌ಗಳಿಗೆ ಕೇಂದ್ರ ಸಚಿವಾಲಯ ಎಚ್ಚರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಗ್ರಾಹಕರಿಂದ ಸೇವಾ ಶುಲ್ಕದ ಹೆಸರಿನಲ್ಲಿ ರೆಸ್ಟೋರೆಂಟ್‌ಗಳು ಅಕ್ರಮವಾಗಿ ಬಿಲ್ ವಸೂಲಿ ಮಾಡುತ್ತಿರುವ ಬಗ್ಗೆ ಕೇಂದ್ರ ಗಂಭೀರವಾಗಿದೆ. ಬಲವಂತವಾಗಿ ಸೇವಾ ಶುಲ್ಕ ವಸೂಲಿ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಎಚ್ಚರಿಕೆ ನೀಡಿದೆ.

ವಾಸ್ತವವಾಗಿ ಸೇವಾ ಶುಲ್ಕವನ್ನು ಪಾವತಿಸುವುದು ಕಡ್ಡಾಯವಲ್ಲ. ನಿಯಮಾನುಸಾರ ಸೇವಾ ಶುಲ್ಕವನ್ನು ಬಿಲ್‌ನಲ್ಲಿ ಸೇರಿಸಲಾಗಿದ್ದರೂ, ಅದನ್ನು ಪಾವತಿಸುವುದು ಗ್ರಾಹಕರಿಗೆ ಬಿಟ್ಟ ವಿಚಾರ. ಸೇವಾ ಶುಲ್ಕವನ್ನು ಗ್ರಾಹಕರು ಸ್ವಯಂಪ್ರೇರಣೆಯಿಂದ ಮಾತ್ರ ಪಾವತಿಸಬಹುದು. ಸೇವಾ ಶುಲ್ಕವನ್ನು ಪಾವತಿಸದಿದ್ದರೆ ಶುಲ್ಕ ವಿಧಿಸಲು ರೆಸ್ಟೋರೆಂಟ್‌ಗಳಿಗೆ ಯಾವುದೇ ಹಕ್ಕಿಲ್ಲ. ಸೇವಾ ಶುಲ್ಕ ಪಾವತಿಸಲು ಗ್ರಾಹಕರು ನಿರಾಕರಿಸಿದರೆ ಅವರಿಂದ ಬಲವಂತವಾಗಿ ಹಣ ಪಡೆಯಲಾಗುತ್ತಿದೆ. ಈ ಬಗ್ಗೆ ಗ್ರಾಹಕರಿಂದ ಬರುತ್ತಿರುವ ದೂರುಗಳಿಗೆ ಕೇಂದ್ರ ಸಚಿವಾಲಯ ಸ್ಪಂದಿಸಿದ್ದು, ರೆಸ್ಟೋರೆಂಟ್‌ಗಳು ಬಲವಂತವಾಗಿ ಶುಲ್ಕ ವಿಧಿಸುವಂತಿಲ್ಲ ಎಂದು ಸೂಚಿಸಿದೆ. ಈ ಕುರಿತು ಚರ್ಚಿಸಲು ಮುಂದಿನ ತಿಂಗಳ(ಜೂನ್) 2ರಂದು ನ್ಯಾಷನಲ್‌ ರೆಸ್ಟೋರೆಂಟ್‌ ಅಸೋಸಿಯೇಷನ್‌ ಆಫ್‌ ಇಂಡಿಯಾದೊಂದಿಗೆ ಮಾತುಕತೆ ನಡೆಸಲಿದೆ.

ಏಪ್ರಿಲ್ 2017 ರ ಕಾಯಿದೆಯ ಪ್ರಕಾರ, ರೆಸ್ಟೋರೆಂಟ್‌ಗಳು ಸೇವಾ ಶುಲ್ಕವನ್ನು ವಿಧಿಸಲಾಗುವಂತಿಲ್ಲ. ಸೇವಾ ಶುಲ್ಕವನ್ನು ಪಾವತಿಸುವುದಿಲ್ಲವೆಂದು ಕಾರಣ ನೀಡಿ ಗ್ರಾಹಕರನ್ನು ರೆಸ್ಟೋರೆಂಟ್‌ಗೆ ಅನುಮತಿಸದಿರುವುದೂಕೂಡ ಕಾನೂನಿನ ಪ್ರಕಾರ ಅಪರಾಧವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss