ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಡಿಲಿನ ಸಂದರ್ಭ ಕಂಪ್ಯೂಟರ್ ಸ್ವಿಚ್ ಆಫ್ ಮಾಡಲು ಹೋದ ಪಿಡಿಒ ಸಿಡಿಲಾಘಾತದಿಂದ ಅಸ್ವಸ್ಥಗೊಂಡ ಘಟನೆ ಬನ್ನೂರು ಗ್ರಾಮ ಪಂಚಾಯತ್ ಕಚೇರಿಯಲ್ಲಿ ನಡೆದಿದೆ.
ಬನ್ನೂರು ಗ್ರಾಮ ಪಂಚಾಯಿತಿ ಪಿಡಿಒ ಚಿತ್ರಾವತಿ ಅವರು ಕಂಪ್ಯೂಟರ್ ಆಫ್ ಮಾಡುವ ವೇಳೆ ಸಿಡಿಲು ಬಡಿದು ಕೆಳಗೆ ಬಿದ್ದಿದ್ದಾರೆ.
ಕೂಡಲೇ ಸ್ಥಳದಲ್ಲಿದ್ದ ಸದಸ್ಯರು ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು.
ಕೂಡಲೇ ಪುತ್ತೂರು ತಾಲೂಕಿನ ಬನ್ನೂರು ಗ್ರಾಮ ಪಂಚಾಯತ್ ಪಿಡಿಒ ಅವರನ್ನು ಪಂಚಾಯತ್ ಅಧ್ಯಕ್ಷರಾದ ಸ್ಮಿತಾ ನಾಯ್ಕ್, ಹರಿಣಾಕ್ಷಿ, ಜಯ, ರಾಘವೇಂದ್ರ ತಿಮ್ಮಪ್ಪ ಪೂಜಾರಿ ಅವರು ಕಾರಿನಲ್ಲಿ ಆಸ್ಪತ್ರೆಗೆ ಸೇರಿಸಿದ್ದಾರೆ.