February 2, 2026
Monday, February 2, 2026
spot_img

ದಲೈಲಾಮಾಗೆ ಗ್ರ್ಯಾಮಿ ಪ್ರಶಸ್ತಿ: ಬೌದ್ಧಗುರು ರಚಿಸಿದ ಆಲ್ಬಂ ಯಾವುದು? ಅದರ ವಿಶೇಷತೆ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೌದ್ಧಗುರುವಾದ ದಲೈಲಾಮಾ ಅವರಿಗೆ ಸಂಗೀತ ಲೋಕದ ಪ್ರತಿಷ್ಠಿತ ಪ್ರಶಸ್ತಿಯಾ ಗ್ರ್ಯಾಮಿ ಪ್ರಶಸ್ತಿ ಸಂದಿದೆ.

ದಲೈ ಲಾಮಾ ಅವರ ಆಲ್ಬಂಗೆ ಬೆಸ್ಟ್ ಆಡಿಯೋ ಬುಕ್, ನರೇಷನ್, ಸ್ಟೋರಿ ಟೆಲ್ಲಿಂಗ್ ರೆಕಾರ್ಡಿಂಗ್ ವಿಭಾಗದಲ್ಲಿ ಪ್ರಶಸ್ತಿ ಸಂದಿದೆ.

ದಲೈಲಾಮಾರಿಗೆ ಈಗ 90 ವರ್ಷ. ಅವರಿಗೆ ಪ್ರಶಸ್ತಿಯನ್ನು ತಂದುಕೊಟ್ಟಿರುವ ಆಲ್ಬಂ ಹೆಸರು – ‘ಮೆಡಿಟೇಷನ್ಸ್ ಹಿಸ್ ಹೋಲಿನೆಸ್ ದ ದಲೈ ಲಾಮಾ’. ಇದು 2025ರಲ್ಲಿ ಬಿಡುಗಡೆಯಾಗಿತ್ತು. ಇದರಲ್ಲಿ ಧ್ಯಾನ ಮತ್ತು ಅಧ್ಯಾತ್ಮಿಕತೆಯ ವಿಚಾರಗಳ ಬಗ್ಗೆ ದಲೈಲಾಮಾ ಅವರು ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ. ಇದು ತಿಳಿಯಾದ ಸಂಗೀತದ ಮೂಲಕ ಅಧ್ಯಾತ್ಮಿಕತೆಯ ಚಿಂತನೆಯು ಕೇಳುಗರನ್ನು ಆಕರ್ಷಿಸುತ್ತದೆ. ಹಾಗಾಗಿಯೇ ಇದು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿಯೂ ಜನಪ್ರಿಯತೆ ಕಂಡಿದೆ.

ಇದರಲ್ಲಿ ಮಾತುಗಳು ಹಾಗೂ ಸಂಗೀತವನ್ನು ಹದವಾಗೆ ಬೆರೆಸಿ ಕೇಳುಗರಿಗೆ ಸಂಗೀತ ಆಲಿಸಿದಂತೆಯೇ ಧ್ಯಾನದ ಬಗ್ಗೆ ಆಕರ್ಷಿತರಾಗುವಂತೆಯೂ ಮಾಡಲಾಗಿದೆ. ಇದು ನಾಮಿನೇಟ್ ಆಗಿದ್ದ , ಪ್ರಶಸ್ತಿ ಆಯ್ಕೆ ಸಮಿತಿಯು ಇವರ ಈ ಆಲ್ಪಂ ಅನ್ನು ಗ್ರ್ಯಾಮಿ ಗೌರವಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ.

ಅಸಲಿಗೆ, ವೃತ್ತಿಪರ ಸಂಗೀತಗಾರರ ಉತ್ತಮ ಕೆಲಸಗಳಿಗೆ ಗ್ರ್ಯಾಮಿ ಪ್ರಶಸ್ತಿ ಒಲಿಯುುತ್ತದೆ. ಕೆಲವೊಮ್ಮೆ ವೃತ್ತಿಪರರಲ್ಲದವರಿಗೂ ಗ್ಯ್ರಾಮಿ ಪ್ರಶಸ್ತಿ ಈ ಹಿಂದೆ ಒಲಿದಿದ್ದುಂಟು. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಭಾಷಣಗಳುಳ್ಳ ‘ಡ್ರೀಮ್ಸ್ ಆಫ್ ಮೈ ಫಾದರ್’ (2006) ಹಾಗೂ ‘ದ ಅಡಾಸಿಟಿ ಆಫ್ ಹೋಪ್’ (2008) ಆಲ್ಪಂಗಳಿಗೆ ಗ್ರ್ಯಾಮಿ ಪ್ರಶಸ್ತಿ ಸಂದಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !