ಬ್ರಿಟಿಷ್ ನೆಲದಲ್ಲಿ ರಾಷ್ಟ್ರಗೀತೆಗೆ ಹೊಸ ಟ್ಯೂನ್ ಟಚ್ ಕೊಟ್ಟು ಇತಿಹಾಸ ಸೃಷ್ಟಿಸಿದ ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕ್ಕಿ ಕೇಜ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ . ರಾಷ್ಟ್ರಗೀತೆ ಜನಗಣಮನಕ್ಕೆ ಹೊಸ ಬಗೆಯ ಟ್ಯೂನ್ ಟಚ್ ಕೊಟ್ಟಿದ್ದಾರೆ. ಸ್ವಾತಂತ್ರ್ಯ ದಿನಕ್ಕೂ ಮುನ್ನ ದಿನ ಅಂದ್ರೆ14ರಂದು ಸಂಜೆ 5 ಗಂಟೆಗೆ ರಿಕ್ಕಿ ಕೇಜ್ ಸಾರಥ್ಯದ ವಿಭಿನ್ನ ಬಗೆಯ ರಾಷ್ಟ್ರಗೀತೆ ಬಿಡುಗಡೆಯಾಗಿದೆ.

ಅದ್ರಲ್ಲೂ ಬ್ರಿಟಿಷ್ ನೆಲದಲ್ಲಿಯೇ ಅಂದರೆ ಲಂಡನ್ ಅಬೇ ರೋಡ್ ಸ್ಟುಡಿಯೋಸ್ ನಲ್ಲಿ ರಾಷ್ಟ್ರಗೀತೆಯನ್ನು ರೆಕಾರ್ಡ್ ಮಾಡಲಾಗಿದೆ. ಕೇವಲ 3 ಗಂಟೆ ಸಮಯದಲ್ಲಿಯೇ, 100 ಮಂದಿ ಸಿಬೋನಿಕ್ ಮ್ಯೂಸಿಷಿಯನ್ಸ್ ಸಹಯೋಗದಲ್ಲಿ ಜನಗಣಮನ ಸಿದ್ಧವಾಗಿದೆ.

ಈ ಬಗ್ಗೆ ರಿಕ್ಕಿ ಕೇಜ್ ಮಾಹಿತಿ ಹಂಚಿಕೊಂಡಿದ್ದು, ರಾಷ್ಟ್ರಗೀತೆ ಜನಗಣಮನಕ್ಕೆ ಹೊಸ ಬಗೆಯ ಟ್ಯೂನ್ ಟಚ್ ಕೊಡಲಾಗಿದೆ. ಈ ರಾಷ್ಟ್ರಗೀತೆ ಪ್ರೆಸೆಂಟ್ ಮಾಡಲು ನಾನು ಕಾತುರನಾಗಿದ್ದೆ. ಲಂಡನ್ ಮೂಲದ ರಾಯಲ್ ಫಿಲ್ಹಾರ್ಮೋನಿಕ್ ಆರ್ಕೆಸ್ಟ್ರಾದ ಸಹಯೋಗದಲ್ಲಿ ರಾಷ್ಟ್ರಗೀತೆಯನ್ನು ರೆಕಾರ್ಡ್ ಮಾಡಲಾಗಿದೆ. ಈ ಹಿಂದೆ ನಮ್ಮ ದೇಶವನ್ನಾಳಿದ ಬ್ರಿಟಿಷ್ ನೆಲದಲ್ಲಿಯೇ 100 ಮಂದಿ ಸಿಬೋನಿಕ್ ಮ್ಯೂಸಿಷಿಯನ್ಸ್ ಕೈಚಳಕದಿಂದ ಭಾರತದ ರಾಷ್ಟ್ರಗೀತೆ ಸಿದ್ಧವಾಗಿದೆ ಎಂದು ಸಂತಸ ಹಂಚಿಕೊಂಡರು.

ರಾಷ್ಟ್ರಗೀತೆಯ ಅತ್ಯಂತ ನಿರ್ಣಾಯಕ ಅತ್ಯಂತ ಉತ್ತಮ ಆವೃತ್ತಿಯನ್ನು ರಚಿಸುವುದು ಇದರ ಉದ್ದೇಶವಾಗಿತ್ತು. ಇದಕ್ಕಾಗಿ ಯಾವುದೇ ಕಾರ್ಪೊರೇಟ್ ಹಣವನ್ನು ಬಳಸಲಾಗಿಲ್ಲ. ನಾನು ಇದನ್ನು ಪ್ರಪಂಚದಾದ್ಯಂತ ಇರುವ ಭಾರತೀಯರಿಗೆ ಉಡುಗೊರೆಯಾಗಿ ನೀಡುತ್ತಿದ್ದೇನೆ. ನೀವು ಎಲ್ಲಿ ಬೇಕಾದರೂ ಇದನ್ನು ಬಳಸಿ. ನನಗೆ ಯಾವುದೇ ರಾಯಧನ ಬೇಡ. ಎಷ್ಟು ಸಾಧ್ಯವಾಗುತ್ತದೆಯೂ ಅಷ್ಟು ವ್ಯಾಪಕವಾಗಿ ಇದನ್ನು ಹಂಚಿಕೊಳ್ಳಿ. ಅದು ರಾಷ್ಟ್ರಗೀತೆಯ ಅತ್ಯಂತ ಗೌರವಾನ್ವಿತ ಆವೃತ್ತಿಯಾಗಿದೆ ಎಂದು ಕೇಜ್ ಹೇಳಿದ್ದಾರೆ.

ಬ್ರಿಟಿಷ್ ಆರ್ಕೆಸ್ಟ್ರಾ ಭಾರತೀಯ ರಾಷ್ಟ್ರಗೀತೆಯನ್ನು ಪ್ರದರ್ಶಿಸುತ್ತಿರುವುದು ಹೊಸ ಭಾರತ ಏನು ಎಂಬುದರ ಪ್ರತಿಬಿಂಬವಾಗಿದೆ. ‘ಪ್ರತಿಯೊಂದು ದೇಶಕ್ಕೂ ಒಂದು ರಾಷ್ಟ್ರಗೀತೆ ಇದೆ, ಅದು ಏಕೆ ಇದೆ? ಏಕೆಂದರೆ ಸಂಗೀತವು ದೇಶವನ್ನು ಒಟ್ಟಿಗೆ ತರುತ್ತದೆ. ರಾಷ್ಟ್ರಗೀತೆಯ ಮೊದಲ ಕೆಲವು ಟಿಪ್ಪಣಿಗಳನ್ನು ನೀವು ಕೇಳಿದ ನಿಮಿಷ, ನೀವು ಯಾರಾಗಿದ್ದೀರಿ ಅಥವಾ ನೀವು ಎಲ್ಲಿದ್ದೀರಿ ಎಂಬುದು ಮುಖ್ಯವಲ್ಲ, ತಕ್ಷಣವೇ ನೀವು ಅದರೊಂದಿಗೆ ಆಪ್ತರಾಗುತ್ತೀರಿ. ಒಬ್ಬ ಭಾರತೀಯ ಎಂಬ ಹೆಮ್ಮೆಯ ಭಾವನೆ ಮೂಡುತ್ತದೆ. ಈ ಸಂಗೀತವು ಅದನ್ನೇ ಮಾಡುತ್ತದೆಅವರು ಹೇಳಿದರು.

ಮೂರು ತಿಂಗಳು ಪ್ಲ್ಯಾನಿಂಗ್‌ ಮಾಡಿಕೊಳ್ಳಲಾಗಿತ್ತು. ಪ್ರತಿಯೊಬ್ಬ ರಾಯಲ್ ಫಿಲ್ಹಾರ್ಮೋನಿಕ್ ಆರ್ಕೆಸ್ಟ್ರಾ ಸದಸ್ಯರಿಗೆ ಏನನ್ನು ನುಡಿಸಬೇಕು ಎಂಬುದರ ಕುರಿತು ಸಂಕ್ಷಿಪ್ತವಾಗಿ ತಿಳಿಸಬೇಕಾಗಿತ್ತು. ನಾವು ಎಲ್ಲವನ್ನೂ ಕಾಗದದ ಹಾಳೆಯಲ್ಲಿ ಬರೆದು ಅವರ ಎಲ್ಲಾ ಭಾಗಗಳನ್ನು ಅವರಿಗೆ ನೀಡಿದ್ದೇವೆ. ಸುಮಾರು ಮೂರು ತಿಂಗಳುಗಳನ್ನು ತೆಗೆದುಕೊಂಡಿತು. ಆದರೆ ರೆಕಾರ್ಡಿಂಗ್ ಕೇವಲ 45 ನಿಮಿಷಗಳಲ್ಲಿ ನಡೆಯಿತು. ಇದು ಒಂದು ನಿಮಿಷದ ತುಣುಕು. ನಾವು ನಾಲ್ಕೈದು ರಿಹರ್ಸಲ್ ಮಾಡಿದ್ದೇವೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!