ಏಕಾಂಗಿ ಭಾರತ ಸುತ್ತಿದ ಅಮೃತಾ ಜೋಷಿಗೆ ಸಿಲಿಕಾನ್ ಸಿಟಿಯಲ್ಲಿ ಗ್ರ್ಯಾಂಡ್ ವೆಲ್‌ಕಮ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಏಕಾಂಗಿಯಾಗಿ ಭಾರತ ಯಾತ್ರೆ ನಡೆಸಿ ರಾಜಧಾನಿ ಬೆಂಗಳೂರಿಗೆ ಆಗಮಿಸಿದ ಕಾಸರಗೋಡಿನ ಕುಂಬಳೆಯ ಬಾಲಕಿ ಅಮೃತಾ ಜೋಷಿಗೆ ಅದ್ದೂರಿಯ ಸ್ವಾಗತ ಸಿಕ್ಕಿದೆ.
ಈ ಬಗ್ಗೆ ಅಮೃತಾರಿಗೆ ಅಭಿನಂದನೆ ಸಲದಲಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಕರ್ನಾಟಕ ಗಡಿಪ್ರದೇಶಾಭಿವೃದ್ಧಿ ಪ್ರಾಧಿಕಾರವು ಬೆಂಗಳೂರಿನ ಕಾಸರಗೋಡು ಕನ್ನಡಿಗರ ಸಂಘಟನೆ ವಿಕಾಸ ಟ್ರಸ್ಟ್ ಬೆಂಗಳೂರಿನ ಮಹಾನಗರ ಪಾಲಿಕೆಯ ಗಾಜಿನ ಮನೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ಸಂದರ್ಭ ಮಾತನಾಡಿದ ಅಮೃತಾ ಜೋಷಿ,  ದೇಶದ ಜನ, ಜನಾಂಗಗಳ ಬಗ್ಗೆ ನಮಗಿರುವ ತಪ್ಪು  ಭಾವನೆ ದೂರವಾಗಬೇಕು. ಇನ್ನಷ್ಟು ಏಕತೆಮೂಡಬೇಕು. ಕಾಸರಗೋಡಿನ ಸಮಗ್ರ ಜನರಿಗೆ, ಹೆತ್ತವರಿಗೆ, ಸ್ನೇಹಿತರಿಗೆ ನನ್ನ ಈ ಸಾಧನೆ ಅರ್ಪಿಸುತ್ತೇನೆ ಎಂದರು.
ಈಶಾನ್ಯ ಭಾರತ, ಕಾಶ್ಮೀರ ಸೇರಿದಂತೆ ಬರೋಬ್ಬರಿ 22,000 ಕಿಲೋ ಮೀಟರ್ ಏಕಾಂಗಿಯಾಗಿ ಸಂಚರಿಸಿರುವ ಅಮೃತಾ ಬೆಂಗಳೂರು-ಶಿವಮೊಗ್ಗ ಮೂಲಕ ತಮ್ಮೂರು ಕುಂಬಳೆ ತಲುಪಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!