ಮೊಮ್ಮಗಳ ಮೇಲೆ ಅತ್ಯಾಚಾರ ಎಸಗಿದ ತಾತ: ತಂದೆಯ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

6 ವರ್ಷದ ಮೊಮ್ಮಗಳ ಮೇಲೆ ಆಕೆಯ ತಾತನೇ ಅತ್ಯಾಚಾರವೆಸಗಿರುವ (Rape) ಘಟನೆ ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬಾಲಕಿಯ ತಾಯಿ ನೀಡಿದ ದೂರಿನ ಮೇಲೆ ಹುಳಿಮಾವು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಲಕಿಯ ತಂದೆ ರಂಜಿತ್ ಕುಮಾರ್‌ನನ್ನು (35) ಬಂಧಿಸಲಾಗಿದೆ.

ಆರೋಪಿಗಳು ಮೂಲತಃ ತಮಿಳುನಾಡು ಮೂಲದವರಾಗಿದ್ದು, ಪ್ರಸ್ತುತ ಹುಳಿಮಾವು ಸಮೀಪ ವೇಣುಗೋಪಾಲ್ ನಗರದ ನಿವಾಸಿಯಾಗಿದ್ದರು. ರಂಜಿತ್ ಕುಮಾರ್ ತಂದೆ ಚಕ್ರವರ್ತಿ (60), ಅತ್ತೆ ವಿಜಯಮ್ಮ (50) ಹಾಗೂ ಇಬ್ಬರು ಸಹೋದರರು ತಲೆಮರೆಸಿಕೊಂಡಿದ್ದಾರೆ.

ತಂದೆ ರಂಜಿತ್ ಕುಮಾರ್ ಅಜ್ಜಿ, ಚಿಕ್ಕಂಪ್ಪದಿರು ತಲೆ ಮರೆಸಿಕೊಳ್ಳಲು ಸಹಾಯ ಮಾಡಿದ್ದ ಎನ್ನಲಾಗಿದೆ. ತಾಯಿ ಕೆಲಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ. ಯಾರಿಗೂ ಹೇಳಿದಂತೆ ತಾಯಿಯ ಬಳಿ ತಂದೆ, ಅತ್ತೆ, ಮಾವ ಹಾಗೂ ಚಿಕ್ಕಪ್ಪಂದಿರು ಆಮಿಷವೊಡ್ಡಿದ್ದಾರೆ. ಮನೆಯನ್ನು ಮೊಮ್ಮಗಳ ಹೆಸರಿಗೆ ಬರೆಯುತ್ತೇವೆ, ಚಿನ್ನದ ಒಡವೆ ಕೊಡಿಸುತ್ತೇವೆ, ವಿಷಯ ಯಾರಿಗೂ ಗೊತ್ತಾಗಬಾರದು ಎಂದು ಧಮ್ಕಿ ಕೂಡ ಹಾಕಿದ್ದಾರೆ. ಬಳಿಕ ತಾಯಿ ಕೆಲಸಕ್ಕೆ ಹೊರಡುತ್ತೇನೆ ಎಂದು ಸಬೂಬು ಹೇಳಿ ಮನೆಯಿಂದ ಆಚೆಗೆ ಬಂದು ಅಕ್ಕಪಕ್ಕದವರ ಸಹಾಯ ಪಡೆದು ಮಗಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ನಂತರ ಹುಳಿಮಾವು ಪೊಲೀಸ್ ಠಾಣೆಗೆ ಬಂದು ಘಟನೆಯ ಬಗ್ಗೆ ದೂರು ನೀಡಿದ್ದಾರೆ.

ದೂರಿನ ಆಧಾರದಲ್ಲಿ ಪೊಲೀಸರು ತಂದೆಯನ್ನು ಬಂಧಿಸಿದ್ದಾರೆ. ಅತ್ಯಾಚಾರ ಆರೋಪಿ ಚಕ್ರವರ್ತಿ, ಅತ್ತೆ ವಿಜಯಮ್ಮ ಹಾಗೂ ಇಬ್ಬರು ಸಹೋದರರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಸಂತ್ರಸ್ತ ಬಾಲಕಿ ವಾಣಿವಿಲಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!