ಈಗಿನ ಅಪ್ಪ ಅಮ್ಮನಿಗೆ ಈ ಯುಗದಲ್ಲಿ ಮಕ್ಕಳನ್ನು ಬೆಳೆಸೋದು ಹೇಗೆ ಅನ್ನೋ ಚಿಂತೆ ಇದ್ದೇ ಇದೆ. ಇದೇ ಚಿಂತೆಗೆ ಇನ್ನಷ್ಟು ಚಿಂತೆಗಳನ್ನು ಸೇರಿಸೋದು ಅಜ್ಜ-ಅಜ್ಜಿ! ಹೌದು, ಇದು ಎಲ್ಲರಿಗೂ ಕಹಿ ಅನಿಸಬಹುದು, ಆದರೆ ಸುಮಾರು ಕೇಸ್‌ಗಳಲ್ಲಿ ಇದು ಸತ್ಯವೂ ಹೌದು.
ಕೆಲ ಅಜ್ಜ ಅಜ್ಜಿಗಳು ಮಕ್ಕಳಿಗೆ ಸಿಹಿ ತಿಂಡಿ, ಎಣ್ಣೆಯಲ್ಲಿ ಕರಿದದ್ದು, ಮೈದಾ ತಿಂಡಿ ನೀಡುತ್ತಾರೆ. ಪೋಷಕರಿಗೂ ಇದು ಸಮಸ್ಯೆ ಎನಿಸೋದಿಲ್ಲ. ಅವರ ಬಗ್ಗೆ ಮಾತೇ ಆಡೋದಿಲ್ಲ. ಇನ್ನು ಕೆಲ ಅಜ್ಜ ಅಜ್ಜಿಗಳು ಮೊಮ್ಮಕ್ಕಳಿಗೆ ಈ ರೀತಿ ಆಹಾರ ಕೊಡಬೇಡಿ ಅಂದ್ರೆ ಸುಮ್ಮನಾಗ್ತಾರೆ.
ಮೂರನೇ ರೀತಿಯವರು ಕೊಡಬೇಡಿ ಎಂದರೂ ಕೇಳದೇ ಕೊಡೋದು, ಅಪ್ಪ ಅಮ್ಮನಿಗೆ ಹೇಳಬೇಡಿ ಎಂದು ಹೇಳಿ ಕದ್ದು ಮುಚ್ಚಿ ಕೊಡೋದನ್ನು ಮಾಡುತ್ತಾರೆ. ಇದಕ್ಕೆ ಅಜ್ಜ ಅಜ್ಜಿಯ ಎಕ್ಸ್ಟ್ರಾ ಪ್ರೀತಿ ಎಂದು ಹೆಸರು. ಆದರೆ ಇದು ತಪ್ಪು. ಮಕ್ಕಳಿಗೆ ಅಪರೂಪಕ್ಕೆ ಏನೋ ಒಂದು ಕೊಟ್ಟರೆ ಪರವಾಗಿಲ್ಲ. ದಿನವೂ ಕಾಫಿ ಕೊಡೋದು, ತಾವು ತಿನ್ನುವ ಕೈಯಲ್ಲೇ ಮಕ್ಕಳಿಗೆ ತಿನ್ನಿಸೋದು ಇದೆಲ್ಲ ತಪ್ಪು
ಕಾಫಿ ಯಾಕೆ ಬೇಡ?
ಮಕ್ಕಳ ಹಠಮಾರಿತನ, ಒತ್ತಡ, ಹೈಪರ್ ಆಕ್ಟಿವಿಟಿಗೆ ಕೆಫೀನ್ ಕಾರಣವಾಗುತ್ತದೆ
ಮಕ್ಕಳು ಹೆಚ್ಚು ಮಲಗಿದಷ್ಟು ಉತ್ತಮ, ಕಾಫಿ ಟೀ ಇಂದ ರಾತ್ರಿಯೂ ನಿದ್ದೆಗೆಡುವಂತೆ ಆಗುತ್ತದೆ. ಇದು ಅನಾರೋಗ್ಯಕ್ಕೆ ದಾರಿ
ಹೊಟ್ಟೆ ನೋವು, ಹೊಟ್ಟೆ ಉರಿ, ಅಜೀರ್ಣ ಸಮಸ್ಯೆ ಬಾಧಿಸುತ್ತದೆ
ಬೇಗ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗುತ್ತಾರೆ.
ಅಜ್ಜಿ-ಅಜ್ಜಂದಿರೇ ನಿಮ್ಮ ಪ್ರೀತಿ ಪೋಷಕರಿಗೆ ಅರ್ಥವಾಗುತ್ತದೆ. ವರ್ಷಗಳ ನಂತರ ಮನೆಯಲ್ಲಿ ಮಗುವಿನ ಕಿಲಕಿಲ ಕೇಳಿರುತ್ತೀರಿ, ಮೊಮ್ಮಕ್ಕಳು ಏನು ಕೇಳಿದರೂ ನೀಡುತ್ತೀರಿ. ಇದು ಅವರ ಆರೋಗ್ಯಕ್ಕೆ ಮುಂದೆ ಕಷ್ಟವಾಗುತ್ತದೆ ಎನ್ನೋದು ನಿಮ್ಮ ಮನಸ್ಸಿನಲ್ಲಿ ಇರಲಿ. ಮಕ್ಕಳಿಗೆ ಸಕ್ಕರೆ, ಮೈದಾ, ಎಣ್ಣೆಯ ಪದಾರ್ಥ ಕೊಡದೇ ಹಣ್ಣು, ತರಕಾರಿ, ಡ್ರೈ ಫ್ರೂಟ್ಸ್ ಕೊಟ್ಟು ಆನಂದಿಸಿ.
KIDS HEALTH | ಅಜ್ಜ-ಅಜ್ಜಿ ಇಲ್ಲಿ ಕೇಳಿ, ಒಂಚೂರು ಒಂಚೂರು ಅಂತ ಮೊಮ್ಮಕ್ಕಳಿಗೆ ಕಾಫಿ-ಟೀ ಕೊಡ್ತೀರಾ? ಇದನ್ನು ಫಸ್ಟ್ ಓದಿ

