ದಿಗಂತ ವರದಿ ವಿಜಯಪುರ:
ರಾಜ್ಯಕ್ಕೆ ಬರಬೇಕಾದ ಅನುದಾನ ಕೊಡಿಸಲಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳಗೆ ಸಚಿವ ಎಂ.ಬಿ. ಪಾಟೀಲ ಟಾಂಗ್ ನೀಡಿದರು.
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿಗೆ ಹಿನ್ನೆಡೆಯಾಗುತ್ತಿದೆ ಎಂದು ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಯತ್ನಾಳ ನೀಡಿದ ಮನವಿ ಕುರಿತು ಪ್ರತಿಕ್ರಿಯಿಸಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಲೋಕಸಭೆ ಸದಸ್ಯರೋ, ಅಥವಾ ಶಾಸಕರೋ ? ಎಂದು ಪ್ರಶ್ನಿಸಿದರು.
ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಹಣ ಕೊಡದ ಕಾರಣ ಸುಪ್ರೀಂ ಕೋರ್ಟ್ ಮೊರೆ ಹೋಗಬೇಕಾಯಿತು. ಬರ ಪರಿಹಾರ ಹಣ ನೀಡಲಿಲ್ಲ ಎಂದರು.
ರಾಜ್ಯದ ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊಡಲಿಲ್ಲ. ಹಣ ಕೊಡುವುದಾಗಿ ಹೇಳಿದರೂ ಅಕ್ಕಿ ಹರಾಜು ಹಾಕಿದರೆ ವಿನಃ ರಾಜ್ಯಕ್ಕೆ ಕೊಡಲಿಲ್ಲ ಎಂದರು.
ಯತ್ನಾಳ ಆಗ ಮನವಿ ಕೊಡಬೇಕಿತ್ತು ಎಂದರಲ್ಲದೇ ಚಂದ್ರಬಾಬು ನಾಯ್ಡು, ನಿತೀಶಕುಮಾರ ಅವರಂತೆ ಯತ್ನಾಳ ಸಹ ರಾಜ್ಯಕ್ಕೆ ಹೆಚ್ಚುವರಿ ಅನುದಾನ ಕೊಡಿಸಲಿ ನೋಡೋಣ ಎಂದರು.