ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಹಿಂದೆ ಗ್ರಾಮದಲ್ಲಿ 13 ರಿಂದ 15 ವರ್ಷದ ಬಾಲಕಿಯ ಶವವನ್ನು ಯಾವುದೇ ಮಹಜರು ನಡೆಸದೆ ವಿಲೇವಾರಿ ಮಾಡಲಾಗಿದೆ ಎಂದು ಈಗಾಗಲೇ ದೂರು ನೀಡಿರುವ ಇಚ್ಲಂಪಾಡಿಯ ಜಯಂತ ಟಿ. ಶನಿವಾರ ಮತ್ತೆ ಎಸ್ ಐಟಿ ಠಾಣೆಗೆ ಆಗಮಿಸಿದ್ದು ಮತ್ತೊಂದು ದೂರು ನೀಡಿದ್ದಾರೆ.
ಕಳೆದ 15 ವರ್ಷದ ಹಿಂದೆ ಇದೇ ಗ್ರಾಮದ ವಸತಿಗೃಹ ಒಂದರಲ್ಲಿ 35 ರಿಂದ 40 ವರ್ಷದ ಮಹಿಳೆಯ ಕೊಲೆಯಾಗಿದ್ದು ಪ್ರಕರಣವನ್ನು ತರಾತುರಿಯಲ್ಲಿ ಮುಗಿಸಲಾಗಿದೆ. ಇದು ಕೊಲೆ ಮತ್ತು ಸಾಕ್ಷಿ ನಾಶದ ಪ್ರಕರಣವಾಗಿದೆ. ಇದಲ್ಲದೆ ಹಲವು ಮಹಿಳೆಯರ ಸಾವಿನ ಕುರಿತು ತಿಳಿದು ಬಂದಿದೆ ಈ ಬಗ್ಗೆ ಮಾಹಿತಿ ಸಂಗ್ರಹ ಕಾರ್ಯದಲ್ಲಿ ತೊಡಗಿದ್ದೇನೆ. ಇಂತಹ ಪ್ರಕರಣಗಳನ್ನು ಮುಚ್ಚಿ ಹಾಕಿರುವ ಪೊಲೀಸ್ ಅಧಿಕಾರಿಗಳ ವಿರುದ್ಧವೂ ಕ್ರಮಗೊಳ್ಳಬೇಕು ಎಂದು ಅವರು ದೂರು ನೀಡಿದ್ದಾರೆ.
ಸೋಮವಾರ ಎಸ್ ಐಟಿ ಅಧಿಕಾರಿಗಳು ಠಾಣೆಗೆ ಬರುವಂತೆ ಹೇಳಿದ್ದಾರೆ ಎಂದು ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.