ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ಕಣ್ಣೂರು ಬಳಿ ರೈಲ್ವೆ ಹಳಿಯ ಮೇಲೆ ಭಾರೀ ಗಾತ್ರದ ಕಲ್ಲುಗಳಿರಿಸಿ ವಿದ್ವಂಸಕ ಕೃತ್ಯ ನಡೆಸಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದ್ದು, ಲೋಕೋ ಪೈಲೆಟ್‌ಗಳ ಸಮಯ ಪ್ರಜ್ಞೆಯಿಂದಾಗಿ ಭಾರೀ ಅನಾಹುತ ಕೂದಲೆಳೆ ಅಂತರದಲ್ಲಿ ತಪ್ಪಿದೆ.
ಕಣ್ಣೂರು -ಕಣ್ಣೂರು ಸೌತ್ ನಡುವಿನ ಹಳಿಯಲ್ಲಿ ಈ ಘಟನೆ ನಡೆದಿದೆ. ರೈಲು ಚಲಾಯಿಸುತ್ತಿದ್ದ ಲೋಕಲ್ ಪ್ಯಾಸೆಂಜರ್ ರೈಲುಗಾಡಿಯೊಂದು ಸಂಚರಿಸಿತ್ತು. ಈ ಸಂದರ್ಭ ನಿಗೂಢ ಶಬ್ದವೊಂದು ಕೇಳಿ ಬಂದ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ ಕಗ್ಗಲ್ಲುಗಳನ್ನಿರಿಸಿರುವುದು ಕಂಡುಬಂತು. ಕೂಡಲೇ ರೈಲ್ವೇ ಅಧಿಕಾರಿಗಳಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿ ಹಳಿಯನ್ನು ಸರಿಪಡಿಸಲಾಯಿತು.
ಈ ಮಧ್ಯೆ ರಾತ್ರಿ 8.30ರ ಸುಮಾರಿಗೆ ವಳಪಟ್ಟಣಂ – ಪಾಪಿನಾಶ್ಶೇರಿಯಲ್ಲಿ ಇಂತಹುದೇ ಕೃತ್ಯ ನಡೆದಿರುವುದಾಗಿ ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ