ಹೀಟ್‌ ವೇವ್‌ ಗೆ ತತ್ತರಿಸಿದ ಸ್ಪೇನ್: ಹತ್ತೇ ದಿನದಲ್ಲಿ 500 ಕ್ಕೂ ಹೆಚ್ಚು ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕಳೆದ 10 ದಿನಗಳ ಹಿಂದೆ ಸ್ಪೇನ್‌ಗೆ ಅಪ್ಪಳಿಸಿದ ಶಾಖದ ಅಲೆಯ ತೀವ್ರತೆಗೆ 500 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಹೇಳಿದ್ದಾರೆ.
ʼಆರೋಗ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ, ಅತಿಹೆಚ್ಚಿನ ತಾಪಮಾನದಿಂದಾಗಿ 500ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆʼ ಎಂದು ಸ್ಯಾಂಚೆಜ್ ಹೇಳಿದ್ದಾರೆ. ಕಳೆದ ವಾರ ಸ್ಪೇನ್‌ನ ಕೆಲವು ಪ್ರದೇಶಗಳಲ್ಲಿ 45 ಡಿಗ್ರಿ ಸೆಲ್ಸಿಯಸ್ (113 ಡಿಗ್ರಿ ಫ್ಯಾರನ್‌ಹೀಟ್)ಗೆ ತಾಪಮಾನ ಏರಿಕೆಯಾಗಿದೆ. “ಹವಾಮಾನ ತುರ್ತುಸ್ಥಿತಿ ಒಂದು ವಾಸ್ತವʼ ವಿಚಾರ ಎಂದು ಪ್ರಧಾನ ಮಂತ್ರಿ ಹೇಳಿದ್ದಾರೆ.
ಹೀಟ್‌ ವೇವ್‌ ಪರಿಣಾಮವಾಗಿ ಪಶ್ಚಿಮ ಯೂರೋಪ್‌ನ ಹಲವು ಭಾಗಗಳಲ್ಲಿ ಡಜನ್‌ಗಟ್ಟಲೆ ಕಾಡ್ಗಿಚ್ಚುಗಳು ಸಂಭವಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!