ಹೊಸದಿಗಂತ ವರದಿ,ಮಂಗಳೂರು:
ಅಮೇರಿಕಾದ ಸಿಯಾಟಲ್‌ನಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ವತಿಯಿಂದ ನಡೆದ ಶ್ರೀದೇವಿ ಮಹಾತ್ಮ್ಯೆ ಯಕ್ಷಗಾನಕ್ಕೆ ಭಾರತೀಯ ರಾಯಭಾರಿ ಪ್ರಕಾಶ್ ಗುಪ್ತಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಾಯಭಾರಿ ಪ್ರಕಾಶ್ ಗುಪ್ತಾ ಹಾಗೂ ರಾಯಭಾರಿ ಕಚೇರಿಯ ಎಲ್ಲ ಅಧಿಕಾರಿಗಳು ಶ್ರೀದೇವಿ ಮಹಾತ್ಮೆ ಯಕ್ಷಗಾನ ವೀಕ್ಷಿಸಿದ್ದು, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.
ಪಟ್ಲ ಫೌಂಡೇಶನ್‌ಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಎಂ.ಎಲ್. ಸಾಮಗ ಅವರ ಸಹಿತ ಎಲ್ಲಾ ಕಲಾವಿದರನ್ನು ಗೌರವಿಸಿದರು. ಸಿಯಾಟಲ್‌ನ ಕಾರ್ಯಕ್ರಮ ಸಂಯೋಜಕರಾದ ಮಂಜುನಾಥ ಶೆಟ್ಟಿ ಹಾಗೂ ಉದ್ಯಮಿ ರಾಮಚಂದ್ರ ಪೈಲೂರು ಉಪಸ್ಥಿತರಿದ್ದರು.