ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೌರಿ ಗಣೇಶ ಹಬ್ಬವನ್ನು ಸ್ವಾಗತಿಸಲು ಜನರು ತುದಿಗಾಲಿನಲ್ಲಿ ನಿಂತಿದ್ದಾರೆ. ಭಾದ್ರಪದ ಶುಕ್ಲ ಚೌತಿಯಂದು ಗೌರಿ ಗಣೇಶನ ಆಗಮನವನ್ನು ಸ್ವಾಗತಿಸಲು ನಗರದ ಜನರು ಸಜ್ಜಾಗಿದ್ದು, ಗುರುವಾರವೇ ಕೆ.ಆರ್.ಮಾರುಕಟ್ಟೆಯಲ್ಲಿ ಖರೀದಿ ಜೋರಾಗಿತ್ತು.
ಈ ಸಂದರ್ಭಕ್ಕೆ ಬೇಕಾದ ಹೂವು, ಹಣ್ಣು ಸೇರಿದಂತೆ ಅಗತ್ಯ ವಸ್ತುಗಳ ಖರೀದಿಯಲ್ಲಿ ವ್ಯಾಪಾರಿಗಳು ನಿರತರಾಗಿದ್ದರು. ಎಂದಿನಂತೆ ಈ ಬಾರಿಯೂ ಹೂವು, ಹಣ್ಣುಗಳ ಬೆಲೆ ತುಸು ಏರಿಕೆಯಾಗಿದೆ. ಇದು ಗ್ರಾಹಕರಿಗೆ ಸ್ವಲ್ಪ ಬಿಸಿ ಮುಟ್ಟಿಸಿತ್ತು.
ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬೆಲೆ ಕೊಂಚ ಇಳಿಕೆಯಾಗಿದ್ದು, ಖರೀದಿದಾರರಿಗೆ ತೃಪ್ತಿ ತಂದಿದೆ.
ಹಣ್ಣುಗಳ ದರ
ಸೇಬು- ಕೆಜಿಗೆ 120 ರಿಂದ 200ರೂ.
ದಾಳಿಂಬೆ- ಕೆಜಿಗೆ 160 ರೂ.
ಏಲಕ್ಕಿ ಬಾಳೆ – ಕೆಜಿಗೆ 120 ರೂ.
ಸೀತಾಫಲ- ಕೆಜಿಗೆ 100 ರೂ.
ಸಪೋಟ- ಕೆಜಿಗೆ 100 ರೂ.
ದ್ರಾಕ್ಷಿ- ಕೆಜಿಗೆ 120- 200 ರೂ.
ಅನಾನಸ್- ಎರಡಕ್ಕೆ 100-120 ರೂ.
ಹೂವುಗಳ ದರ
ಕನಕಾಂಬರ ಕೆಜಿಗೆ – 3000 ರೂ.
ಮಲ್ಲಿಗೆ – ಕೆಜಿಗೆ 600 ರೂ.
ಗುಲಾಬಿ- ಕೆಜಿಗೆ 250 ರೂ.
ಸೇವಂತಿಗೆ – ಕೆಜಿಗೆ 180 ರೂ.
ಸುಗಂಧರಾಜ-ಕೆಜಿಗೆ 240 ರೂ.