ಹೊಸದಿಗಂತ ಡಿಜಿಟಲ್ ಡೆಸ್ಕ್:
ವೀಕೆಂಡ್ ಯಾರಿಗೆ ತಾನೇ ಮಿಸ್ ಮಾಡೋಕಾಗುತ್ತೆ!. ವೀಕೆಂಡ್ ಅಲ್ಲಿ ಫುಲ್ ಜಾಲಿಮೂಡಲ್ಲೇ ಇರ್‍ತೇವೆ. ಧಿಡೀರ್ ಮಾಡೋ ತಿಂಡಿಗೆ ಮೊರೆ ಹೋಗುವವರೇ ಜಾಸ್ತಿ. ಅವರಿಗಾಗಿ ಸ್ಪೆಷಲ್ ರೆಸಿಪಿ ಇಲ್ಲಿದೆ. ಸಿಂಪಲ್ ಆಗಿ ಸೂಪರ್ ಆಗಿರೋ ಟೋಸ್ಟ್ ನಿಮಗಾಗಿ.
ಬೇಕಾಗುವ ಸಾಮಾಗ್ರಿ:
ಮುಳ್ಳು ಸೌತೆ, ಕ್ಯಾರೆಟ್, ಕ್ಯಾಪ್ಸಿಕಂ, ಈರುಳ್ಳಿ, ಬ್ರೆಡ್, ಆಯಿಲ್/ಬಟರ್, ಲಿಂಬೆ ಹಣ್ಣು
ಮಾಡುವ ವಿಧಾನ:
ಎಲ್ಲಾ ತರಕಾರಿಗಳನ್ನು ಚೆನ್ನಾಗಿ ತೊಳೆದು ಸಣ್ಣ ಸ್ಲೈಸ್ ಮಾಡಿಟ್ಟುಕೊಳ್ಳಿ. ಬ್ರೆಡ್ ಸ್ಲೈಸ್‌ಗೆ ಬೆಣ್ಣೆ ಹೆಚ್ಚಿಟ್ಟುಕೊಂಡು ಎರಡು ಸ್ಲೈಸ್ ಮಧ್ಯೆ ತರಕಾರಿಗಳನ್ನಿಟ್ಟು ಟೋಸ್ಟ್ ಮಾಡಿ ಸರ್ವ್ ಮಾಡಿ.
ಅವಕಾಡೋ ಟೋಸ್ಟ್ ಇದೇ ರೀತಿ ಮಾಡಬಹುದು. ಅವಕಾಡೋ, ಎಣ್ಣೆ, ಬಟರ್, ಲಿಂಬೆ, ಚಿಲ್ಲಿ ಸಾಸ್, ಬ್ರೆಡ್ ಇವಿಷ್ಟು ಇದ್ದರೆ ಇದೇ ರೀತಿ ಅವಕಾಡೋ ಟೋಸ್ಟ್ ಎವರ್‌ಗ್ರೀನ್ ರೆಸಿಪಿ ತುಂಬಾ ಬೇಗನೇ ತಯಾರಿಸಬಹುದು.