Wednesday, September 28, 2022

Latest Posts

ಅಮೆರಿಕ ಡ್ರೊನ್‌ ಗಳಿಗೆ ಅಪ್ಘನ್‌ ಪ್ರವೇಶಿಸಲು ಪಾಕಿಸ್ತಾನ ಸಹಾಯ ಮಾಡಿದೆಯೆಂದ ತಾಲೀಬಾನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಅಮೆರಿಕದ ಡ್ರೋನ್‌ಗಳಿಗೆ ಅಫ್ಘಾನಿಸ್ತಾನಕ್ಕೆ ಪ್ರವೇಶಿಸಲು ತನ್ನ ವಾಯುಪ್ರದೇಶವನ್ನು ಬಳಸಲು ಪಾಕಿಸ್ತಾನವು ಅನುಮತಿ ನೀಡಿದೆ ಎಂದು ತಾಲಿಬಾನ್‌ನ ಹಾಲಿ ರಕ್ಷಣಾ ಸಚಿವ ಮುಲ್ಲಾ ಮೊಹಮ್ಮದ್ ಯಾಕೂಬ್ ಕಾಬೂಲ್‌ನಲ್ಲಿ ಆರೋಪಿಸಿದ್ದಾರೆ.

“ನಮ್ಮ ಮಾಹಿತಿಯ ಪ್ರಕಾರ ಡ್ರೋನ್‌ಗಳು ಪಾಕಿಸ್ತಾನದ ಮೂಲಕ ಅಫ್ಘಾನಿಸ್ತಾನಕ್ಕೆ ಪ್ರವೇಶಿಸುತ್ತಿವೆ, ಅವರು ಪಾಕಿಸ್ತಾನದ ವಾಯುಪ್ರದೇಶವನ್ನ ಬಳಸುತ್ತಿದ್ದಾರೆ. ನಮ್ಮ ವಿರುದ್ಧ ನಿಮ್ಮ ವಾಯುಪ್ರದೇಶವನ್ನು ಬಳಸಬೇಡಿ ಎಂದು ನಾವು ಪಾಕಿಸ್ಥಾನದ ಬಳಿ ಕೇಳುತ್ತೇವೆ” ಎಂದು ಅವರು ಹೇಳಿದ್ದಾರೆ.

ಆದರೆ ಪಾಕಿಸ್ತಾನ ವಿದೇಶಾಂಗ ಸಚಿವಾಲವು ಈ ಆರೋಪವನ್ನು ತಳ್ಳಿಹಾಕಿದೆ. ಜುಲೈನಲ್ಲಿ ಕಾಬೂಲ್‌ನಲ್ಲಿ ಅಲ್ ಖೈದಾ ನಾಯಕ ಅಯ್ಮಾನ್ ಅಲ್-ಜವಾಹಿರಿಯನ್ನು ಕೊಂದ ಡ್ರೋನ್ ದಾಳಿಯಲ್ಲಿತಾನು ಭಾಗಿಯಾಗಿಲ್ಲ ಅದರ ನಂತರದ ಬೆಳವಣಿಗೆಗಳಲ್ಲೂ ತನ್ನ ಕೈವಾಡವಿಲ್ಲ ಎಂದು ಪಾಕಿಸ್ತಾನ ಹೇಳಿದೆ ಎಂದು ಮೂಲಗಳು ವರದಿ ಮಾಡಿವೆ.

ತಾಲಿಬಾನ್ ಜುಲೈನಲ್ಲಿ ನಡೆದ ವೈಮಾನಿಕ ದಾಳಿಯ ಬಗ್ಗೆ ತನಿಖೆ ನಡೆಸುತ್ತಿದೆ. ದಾಳಿಯ ನಂತರ ಅಲ್ ಖೈದಾ ನಾಯಕನ ಮೃತದೇಹ ಪತ್ತೆಯಾಗಿಲ್ಲ ಎಂದು ತಾಲೀಬಾನ್‌ ಹೇಳಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!