ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಸರ್ಕಾರದ ಜನಪ್ರಿಯ ಯೋಜನೆ ಗೃಹಜ್ಯೋತಿ ಇಂದಿನಿಂದ ಜಾರಿಯಾಗಿದೆ.
ಮಾಸಿಕ 200 ಯುನಿಟ್‌ವರೆಗಿನ ವಿದ್ಯುತ್ ಉಚಿತವಾಗಲಿದ್ದು,ಸಾಕಷ್ಟು ಮನೆಗಳಲ್ಲಿ ಫ್ರೀ ವಿದ್ಯುತ್ ಬೆಳಗಲಿದೆ. ಫ್ರೀ ಕರೆಂಟ್ ಬಯಸುವವರು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕಿದೆ, ಈಗಾಗಲೇ ಒಂದು ಕೋಟಿ ಜನರು ಅರ್ಜಿ ಸಲ್ಲಿಸಿದ್ದಾರೆ.
ಈಗಾಗಲೇ ಅರ್ಜಿ ಸಲ್ಲಿಸಿರುವವರಿಗೆ ಇಂದಿನಿಂದ ವಿದ್ಯುತ್ ಫ್ರೀಯಾಗಿರಲಿದ್ದು, ಮಾಸಿಕ ೨೦೦ ಯುನಿಟ್‌ವರೆಗಿನ ವಿದ್ಯುತ್ ಬಳಕೆ ಉಚಿತವಾಗಿರಲಿದೆ. ರಾಜ್ಯದಲ್ಲಿ ಒಟ್ಟಾರೆ 2.14 ಕೋಟಿ ಫಲಾನುಭವಿಗಳಿದ್ದು, ಇನ್ನೂ ಕೋಟಿಗೂ ಹೆಚ್ಚು ಮಂದಿ ಅರ್ಜಿ ಸಲ್ಲಿಸುವುದು ಬಾಕಿ ಇದೆ.
ಹೇಳಿದ್ದಂತೆಯೇ ನಡೆದುಕೊಂಡಿದ್ದೇವೆ ಎಂದು ಕಾಂಗ್ರೆಸ್ ಸರ್ಕಾರ ಹೇಳಿದ್ದು, ಇನ್ನುಳಿದ ಗ್ಯಾರೆಂಟಿಗಳನ್ನು ಹೀಗೆಯೇ ಪೂರೈಸುತ್ತೇವೆ ಎಂದು ಹೇಳಿದೆ. ಈಗಾಗಲೇ ಮಹಿಳೆಯರಿಗೆ ಫ್ರೀ ಬಸ್, ಜನರಿಗೆ ಅಕ್ಕಿ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಜಾರಿ ಮಾಡಿದೆ, ಇದೀಗ ಘೋಷಣೆ ಮಾಡಿದ ಮೊದಲ ಗ್ಯಾರೆಂಟಿಯಾದ ಗೃಹಜ್ಯೋತಿಯೂ ಆರಂಭವಾಗಲಿದೆ.