ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರದ ಮಹಿಳೆಯರಿಗೆ 2000 ರೂ ನೀಡುವ ‘ಗೃಹಲಕ್ಷ್ಮಿ’ ಯೋಜನೆಗೆ ಚಾಲನೆ ಸಿಕ್ಕಿದ್ದು, ಈ ಮೂಲಕ ಮನೆ ಯಜಮಾನಿಯರಿಗೆ ಇಂದಿನಿಂದಲೇ ಪ್ರತಿ ತಿಂಗಳು 2000 ಹಣ ಮನೆ ಯಜಮಾನಿಯರ ಖಾತೆಗೆ ವರ್ಗಾವಣೆಯಾಗಲಿದೆ.
ಇತ್ತ ಕೆಲವು ಮಹಿಳೆಯರ ಖಾತೆಗೆ 2000 ರೂ ಹಣ ಬಂದಿರುವ ಮೆಸೇಜ್ ಬಂದಿದೆ ಎನ್ನಲಾಗಿದೆ .
ಇದೀಗ ನಿಮ್ಮ ಖಾತೆಗೂ ಹಣ ಬಂದಿದೆಯಾ ಎಂದು ಈ ಮೂಲಕ ನೋಡಿ….
1) ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ನೀವು ಅನ್ನಭಾಗ್ಯ ಯೋಜನೆಯ ಹಣವನ್ನು ಚೆಕ್ ಮಾಡುವ DBT ಸ್ಟೇಟಸ್ ವಿಧಾನದಿಂದ ಕೂಡ ನೀವು ನಿಮ್ಮ ಯಾವ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣವು ಯಾವ ದಿನಾಂಕದಂದು ವರ್ಗಾವಣೆ ಆಗಿದೆ ಎನ್ನುವುದರ ಮಾಹಿತಿಯನ್ನು ಪಡೆದು ಕೊಳ್ಳಬಹುದು.
2) ನೀವು ಗೃಹಲಕ್ಷ್ಮಿ ಯೋಜನೆಯ 2000 ಹಣ ಪಡೆದ ತಕ್ಷಣವೇ ನಿಮ್ಮ ಬ್ಯಾಂಕ್ ಖಾತೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ SMS ಕೂಡ ಬರುತ್ತದೆ.
3) ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಖಾತೆಯ ಮಾಹಿತಿಯನ್ನು ತಿಳಿದುಕೊಳ್ಳುವ ಮೂಲಕ ಗೃಹಲಕ್ಷ್ಮಿ ಯೋಜನೆ ಹಣ ಬಂದಿದೆಯೋ ಇಲ್ಲವೋ ಎಂಬುದನ್ನು ದೃಢಪಡಿಸಿಕೊಳ್ಳಬಹುದು.
ಈ ರೀತಿ ಚೆಕ್ ಮಾಡಬಹುದು.
ಮೊದಲು https://ahara.kar.nic.in/Home/EServices ವೆಬ್ ಸೈಟ್ ಭೇಟಿ ಕೊಡಿ. ನಂತರ ಇ ಪಡಿತರ ಚೀಟಿ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಗ್ರಾಮ ಪಂಚಾಯತ್ ಹಾಗೂ ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು. ನಂತರ ಗೋ ಮೇಲೆ ಕ್ಲಿಕ್ ಮಾಡಿ..ಬಳಿಕ ಇನ್ನೊಂದು ಪೇಜ್ ಓಪನ್ ಆಗುತ್ತದೆ..ಅಲ್ಲಿ ನಿಮ್ಮ ಆರ್ ಸಿ ನಂಬರ್, ವಿಳಾಸ, ರೇಷನ್ ಕಾರ್ಡ್ ಬಗ್ಗೆ ಮಾಹಿತಿ ಬರುತ್ತದೆ. ಆರ್ ಸಿ ನಂಬರ್ ಬಳಿಕ ಮಹಿಳೆಯರ ಹೆಸರಿದ್ದರೆ ಮಾತ್ರ ಅವರನ್ನು ಕುಟುಂಬದ ಮುಖ್ಯಸ್ಥರೆಂದು ಪರಿಗಣಿಸಲಾಗುತ್ತದೆ. ಇಲ್ಲಿ ಮಹಿಳೆಯರ ಹೆಸರಿದ್ದವರು ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಸಿದ್ದರೆ 2 ಸಾವಿರ ಜಮಾ ಮಾಡಲಾಗುತ್ತದೆ.