ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಡಲೆ ಹಿಟ್ಟು ಇಲ್ಲದ ಅಡುಗೆ ಮನೆ ಇರುವುದಿಲ್ಲ. ಯಾರಾದರೂ ನೆಂಟರಿಷ್ಟರು ಬಂದಾಗ ಥಟ್ ಅಂತ ನೆನಪಿಗೇ ಬರೋದು ಬೋಂಡಾ, ಬಜ್ಜಿ ಮಾಡೋದು. ಅದಕ್ಕೆ ಕಡಲೆಹಿಟ್ಟು ಬೇಕೇ ಬೇಕು. ಹಾಗೆಯೇ ಅಡುಗೆ, ತಿಂಡಿ ಮತ್ತು ಬ್ಯೂಟಿ ಪ್ಯಾಕ್‌ಗಳಲ್ಲಿ ಇದು ಅತ್ಯಗತ್ಯ.
ಸಂಜೆಯಾದರೆ ಬಿಸಿ ಬಿಸಿ ಪಕೋಡಿ ತಿನ್ನಬೇಕು ಅನ್ನಿಸುತ್ತದೆ. ಅದಕ್ಕೆ ಕಡಲೆ ಹಿಟ್ಟು ಖಂಡಿತ ಬೇಕು. ಇದು ಪ್ರೋಟೀನ್, ವಿಟಮಿನ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಸತುವುಗಳಂತಹ ಖನಿಜಗಳಿಂದ ಸಮೃದ್ಧವಾಗಿದೆ. ಕಡಿಮೆ ಗ್ಲೈಸೆಮಿಕ್ ಇರುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣವು ಹಠಾತ್ ಏರಿಕೆಯಾಗುವುದಿಲ್ಲ.
ಕಡಲೆಹಿಟ್ಟನ್ನು ಪಕೋಡಿ, ಲಡ್ಡೂ, ಮೈಸೂರು ಪಾಕ್, ಸೋಂಪಾಪಿಡಿ ಮುಂತಾದ ಅನೇಕ ಸಿಹಿತಿಂಡಿಗಳನ್ನು ತಯಾರಿಸಲು ಬಳಸಲಾಗುತ್ತದೆ. ಇದು ಹೆಣ್ಣುಮಕ್ಕಳ ಸೌದರ್ಯವರ್ಧಕವಾಗಿಯೂ ಕೆಲಸ ಮಾಡುತ್ತದೆ. ಮೊಡವೆ ತಡೆಗಟ್ಟುವಿಕೆಗೆ ಇದು ವಿಶೇಷವಾಗಿ ಉಪಯುಕ್ತವಾಗಿದೆ. ತ್ವಚೆಗೆ ಅನುಗುಣವಾಗಿ ಜೇನುತುಪ್ಪ, ನಿಂಬೆಹಣ್ಣು, ಶ್ರೀಗಂಧ, ರೋಸ್ ವಾಟರ್, ಮುಲ್ತಾನಿ ಮಿಟ್ಟಿ ಮುಂತಾದ ಇತರ ಪದಾರ್ಥಗಳೊಂದಿಗೆ ಕಡಲೆ ಹಿಟ್ಟನ್ನು ಬೆರೆಸಿ ಫೇಸ್ ಪ್ಯಾಕ್‌ಗಳನ್ನು ತಯಾರಿಸಬಹುದು. ಪ್ಯಾಕ್ ಅನ್ನು ಅನ್ವಯಿಸಿದ 30 ನಿಮಿಷಗಳ ನಂತರ ಸ್ವಚ್ಛಗೊಳಿಸಿದರೆ ಚರ್ಮವು ಹೊಳಪು ಮತ್ತು ಮೃದುವಾಗುತ್ತದೆ.