Sunday, October 1, 2023

Latest Posts

ಕಳೆದೆರಡು ವರ್ಷದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರೆಷ್ಟು? ಮಾಹಿತಿ ನೀಡಿದ ಸಚಿವ ಶಿವಾನಂದ ಪಾಟೀಲ

ಹೊಸದಿಗಂತ ವರದಿ ಹಾವೇರಿ:

2020ರಲ್ಲಿ 500 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದಾರೆ. 2021ರಲ್ಲಿ 600 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದಾರೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.

ರಾಜ್ಯದಲ್ಲಿ ಹೆಚ್ಚುತ್ತಿರುವ ರೈತ ಆತ್ಮಹತ್ಯೆ ಕುರಿತು ಹಾವೇರಿ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಕುರಿತು FIR ಪರಿಗಣೆನೆ ತೆಗೆದುಕೊಂಡರೆ ರೈತರು ವಿವಿಧ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುತ್ತಾರೆ. ಆದರೆ ಮಾಧ್ಯಮಗಳು ಆತಂಕದ ರೀತಿಯಲ್ಲಿ ವರದಿ ಮಾಡಿದರೆ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗುತ್ತದೆ ಎಂದರು.

ಸಂಬಂಧಿಕರು ಆತ್ಮಹತ್ಯೆ ಅಂತಾ ಕಂಪ್ಲೇಟ್ ಕೊಟ್ಟರೆ ಪರಿಹಾರ ಸಿಗುತ್ತೆ ಎನ್ನೋದು ದುರಾಸೆ. ಕೆಲವರು ಕುಡಿದು ಸತ್ತರೆ, ಕೆಲವರು ಹಾರ್ಟ್ ಅಟ್ಯಾಕ್ ಆಗಿ ಸತ್ತವರೂ ಇದಾರೆ. ನಾವು 2015 ರಲ್ಲಿ ಐದು ಲಕ್ಷ ಪರಿಹಾರ ಕೊಡೊಕೆ ಶುರು ಮಾಡಿದ್ದು ಅವತ್ತಿಂದಾ ಆತ್ಮಹತ್ಯೆ ಗಳು ಹೆಚ್ಚಾಗುತ್ತಾ ಇರುವುದನ್ನು ಗಮನಿಸಬಹುದು.
ನಿಜವಾಗಿ ರೈತರಿಗೆ ಅನ್ಯಾಯ ಆಗಿದ್ದರೆ ಪರಿಹಾರ ವಿಳಂಬ ಮಾಡುವುದಿಲ್ಲ. ಕೆಲ ಮುಖಂಡರು ಕೂಡಾ ಪರಿಹಾರ ಸಿಗುವ ನಿರೀಕ್ಷೆಯಿಂದ ಆ ರೀತಿ ವರದಿ ಮಾಡುತ್ತಾರೆ. 2014 ರ ಹಿಂದೆ ಎಷ್ಟು,2015 ರ ನಂತರ ಎಷ್ಟು ಆತ್ಮಹತ್ಯೆ ಅಂತಾ ನೀವೆ ನೋಡಿ ಎಂದು ಮಾಹಿತಿ ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!