Wednesday, February 28, 2024

ದೇಶದಲ್ಲಿ ಹೆಚ್ಚುತ್ತಿರುವ ಸೈಬರ್ ವಂಚನೆ ಜಾಲ: ಹಾಟ್ ಸ್ಪಾಟ್ ಪ್ರದೇಶಗಳ ಪತ್ತೆಗೆ ಏಳು ತಂಡ ರಚನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಹಾಟ್ ಸ್ಪಾಟ್ ಪ್ರದೇಶಗಳ ಪತ್ತೆಗೆ ಏಳು ತಂಡಗಳನ್ನು ರಚನೆ ಮಾಡಿದೆ.

ನ್ಯಾಶನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ ನಡೆಸಿರುವ ಸಮೀಕ್ಷೆಯಲ್ಲಿ ಈ ಹಿಂದೆ 2020ರಲ್ಲಿದ್ದ 50,035 ಸೈಬರ್ ಅಪರಾಧ ಪ್ರಕರಣಗಳ ಸಂಖ್ಯೆ ಮುಂದಿನ ಎರಡೇ ವರ್ಷಗಳಲ್ಲಿ 65,893 ಕ್ಕೆ ತಲುಪಿರುವುದು ಪತ್ತೆಯಾಗಿದೆ.

ಈ ಪೈಕಿ ತೆಲಂಗಾಣದಲ್ಲಿ 15,297, ಕರ್ನಾಟಕದಲ್ಲಿ 12,556 ಪ್ರಕರಣಗಳು ಪತ್ತೆಯಾಗಿದ್ದು, ಈ ರಾಜ್ಯಗಳು ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. 5,496 ಪ್ರಕರಣಗಳೊಂದಿಗೆ ಉತ್ತರಪ್ರದೇಶ, ಮತ್ತು 8,249 ಪ್ರಕರಣಗಳೊಂದಿಗೆ ಮಹಾರಾಷ್ಟ್ರ ನಂತರದ ಸ್ಥಾನಗಳಲ್ಲಿವೆ. ಇವುಗಳಿಗೆ ಕಡಿವಾಣ ಹಾಕಲು ಕೇಂದ್ರ ಈಗ ದಿಟ್ಟ ಹೆಜ್ಜೆಯಿರಿಸುತ್ತಿದೆ.

ಇನ್ನು ಅಂಶಗಳ ಪ್ರಕಾರ ಇದುವರೆಗೆ 4.7 ಲಕ್ಷಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಸಕಾಲಿಕ ಕಾರ್ಯಾಚರಣೆಗಳ ಮೂಲಕ ಬರೋಬ್ಬರಿ 1,200 ಕೋಟಿ ರೂ.ಗೂ ಹೆಚ್ಚು ಹಣ ವಂಚಕರ ಪಾಲಾಗುವುದನ್ನು ತಪ್ಪಿಸಲಾಗಿದೆ. ಆನ್‌ಲೈನ್ ಸೈಬರ್ ದೂರು ಸಲ್ಲಿಸಲು, ತಕ್ಷಣ ಸಹಾಯ ಪಡೆಯಲು ಟೋಲ್-ಫ್ರೀ ಸಹಾಯವಾಣಿ ಸಂಖ್ಯೆ ’1930’ ಈಗಾಗಲೇ ಅಸ್ಥಿತ್ವದಲ್ಲಿದೆ.

ಇದಲ್ಲದೆ ಸುಮಾರು 3.2 ಲಕ್ಷ ಸಿಮ್ ಕಾರ್ಡ್‌ಗಳು ಮತ್ತು 49,000 ಐಎಂಇಐಗಳನ್ನು ನಿರ್ಬಂಧಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!