Monday, March 27, 2023

Latest Posts

1.5ಲಕ್ಷ ಕೋಟಿ ರೂ.ಗೂ ಮೀರಿದೆ ಜನವರಿ ತಿಂಗಳ ಜಿಎಸ್‌ಟಿ ಸಂಗ್ರಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಜನವರಿ ತಿಂಗಳಲ್ಲಿ ದೇಶದ ಒಟ್ಟೂ ಜಿಎಸ್‌ಟಿ ಸಂಗ್ರಹವು 1.55 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಇದು ಇಲ್ಲಿಯವರೆಗಿನ ಎರಡನೇ ಅತಿ ಹೆಚ್ಚಿನ ಸಂಗ್ರಹ ಎಂದು ಹಣಕಾಸು ಸಚಿವಾಲಯವು ತಿಳಿಸಿದೆ.

ಒಟ್ಟಾರೆಯಾಗಿ 1,55,922 ಕೋಟಿ ರೂಪಾಯಿ ಸರಕು ಮತ್ತು ಸೇವಾ ತೆರಿಗೆ ಸಂಗ್ರಹವಾಗಿದ್ದು ಅದರಲ್ಲಿ ಕೇಂದ್ರ ಜಿಎಸ್‌ಟಿ (CGST) 28,963ಕೋಟಿ ರೂ. ಸಂಹ್ರಗವಾಗಿದ್ದು 36,730 ಕೋಟಿ ರೂ. ರಾಜ್ಯ ತೆರಿಗೆ ಸಂಗ್ರಹವಾಗಿದೆ. IGST 79,599 ಕೋಟಿ ರೂ. ಹಾಗು ಸೆಸ್ 10,630 ಕೋಟಿ ರೂ. ಕಲೆ ಹಾಕಲಾಗಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಜನವರಿ 2023 ರ ಆದಾಯವು ಕಳೆದ ವರ್ಷದ ಇದೇ ಅವಧಿಯ ಜಿಎಸ್‌ಟಿ ಆದಾಯಕ್ಕಿಂತ 24 ಶೇಕಡಾ ಹೆಚ್ಚಾಗಿದೆ.

ಸತತ ಮೂರನೇ ಬಾರಿಗೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಎಸ್‌ಟಿ ಸಂಗ್ರಹ 1.50 ಲಕ್ಷ ಕೋಟಿ ರೂ. ದಾಟಿದೆ. 2022ರ ಏಪ್ರಿಲ್‌ ನಲ್ಲಿ 1.68 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು. ಇದರ ನಂತರ ಪ್ರಸ್ತುತ ಜನವರಿಯಲ್ಲಾದ ಸಂಗ್ರಹಣೆಯು ಎರಡನೇ ಅತ್ಯಧಿಕವಾಗಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!