ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚಿಗೆ ಜಿಎಸ್‌ಟಿ ತೆರಿಗೆಯಲ್ಲಿ ಕೇಂದ್ರ ಸರ್ಕಾರ ತಂದ ಸುಧಾರಣೆ ದಸರಾ, ದೀಪಾವಳಿ ಹಬ್ಬದ ಸಂದರ್ಭದ ವ್ಯಾಪಾರ -ವಹಿವಾಟಿಗೆ ಭರ್ಜರಿ ಬೂಸ್ಟ್ ನೀಡಿದೆ.
ಈ ಬಾರಿ ಸುಮಾರು 5 ಲಕ್ಷ 40 ಸಾವಿರ ಕೋಟಿ ರೂಪಾಯಿ ವಹಿವಾಟು ನಡೆದಿದ್ದು, ಇದು ಹಬ್ಬದ ಋತುವಿನ ಅತಿ ಹೆಚ್ಚು ವಹಿವಾಟು ಎಂಬ ದಾಖಲೆ ಬರೆದಿದೆ.
2024 ರ ನವರಾತ್ರಿಯಿಂದ ದೀಪಾವಳಿ ಅವಧಿಯವರೆಗಿನ ಹಬ್ಬದ ಮಾರಾಟಕ್ಕೆ ಹೋಲಿಸಿದರೆ ಈ ಬಾರಿ ಶೇಕಡಾ 25 ರಷ್ಟು ಹೆಚ್ಚಳವಾಗಿದೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ- CAIT ಯ ಸಂಶೋಧನೆ ಮತ್ತು ವ್ಯಾಪಾರ ಅಭಿವೃದ್ಧಿ ಸಂಘ ತಿಳಿಸಿದೆ. ಇನ್ನು ಸಿಹಿತಿಂಡಿ, ಗೃಹಾಲಂಕಾರ, ಪಾದರಕ್ಷೆಗಳು, ಸಿದ್ಧ ಉಡುಪುಗಳು, ದೈನಂದಿನ ಬಳಕೆಯ ಉಪಕರಣಗಳ ಮೇಲಿನ ಜಿಎಸ್ ಟಿ ದರಗಳಲ್ಲಿ ಕಡಿತಗೊಳಿಸಿದ್ದರಿಂದ ವಹಿವಾಟು ವೃದ್ಧಿಸಿದೆ.