ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇ 1 ರಂದು ಕೇಂದ್ರ GST ಅಂಕಿಅಂಶಗಳನ್ನು ಬಿಡುಗಡೆ ಮಾಡಿದ್ದು, ದಾಖಲೆಯ GST ಕಲೆಕ್ಷನ್ ಆಗಿದೆ. ವಾರ್ಷಿಕವಾಗಿ ಕಳೆದ ವರ್ಷಕ್ಕಿಂತ 12.6% ಹೆಚ್ಚಳವಾಗಿದೆ. ಸರ್ಕಾರದ ಖಜಾನೆಗೆ ₹2.37 ಲಕ್ಷ ಕೋಟಿ ಬಂದಿದೆ.
ಏಪ್ರಿಲ್ 2024 ರಲ್ಲಿ ಸರ್ಕಾರ ಒಟ್ಟು ₹2.10 ಲಕ್ಷ ಕೋಟಿ ಸಂಗ್ರಹಿಸಿತ್ತು. ಜುಲೈ 1, 2017 ರಂದು GST ಜಾರಿಗೆ ಬಂದ ನಂತರ ಇದು ಎರಡನೇ ಅತಿ ದೊಡ್ಡ ಕಲೆಕ್ಷನ್ ಆಗಿತ್ತು. ಇದಕ್ಕೂ ಮೊದಲು ಮಾರ್ಚ್ 2025 ರಲ್ಲಿ ಈ ಕಲೆಕ್ಷನ್ ₹1.96 ಲಕ್ಷ ಕೋಟಿ ಇತ್ತು.
2024-25 ನೇ ಸಾಲಿನಲ್ಲಿ ಸರ್ಕಾರದ ಖಜಾನೆಗೆ ಒಟ್ಟು ₹19.56 ಲಕ್ಷ ಕೋಟಿ GST ಕಲೆಕ್ಷನ್ ಆಗಿದೆ. ದೇಶೀಯ ವಹಿವಾಟಿನಿಂದ ಸರ್ಕಾರ ₹1.90 ಲಕ್ಷ ಕೋಟಿ ತೆರಿಗೆ ಸಂಗ್ರಹಿಸಿದೆ. ಆಮದು ಮಾಡಿದ ವಸ್ತುಗಳ ಮೂಲಕ ಸರ್ಕಾರಕ್ಕೆ ₹46,913 ಕೋಟಿ GST ಬಂದಿದೆ. ಕಳೆದ ವರ್ಷಕ್ಕಿಂತ ಇದರಲ್ಲಿ 20.8% ಹೆಚ್ಚಳವಾಗಿದೆ.