ಎಲೆಕ್ಷನ್ ಮುಗಿದಮೇಲೆ ಗ್ಯಾರೆಂಟಿ ಬಂದ್‌ ಮಾಡಲ್ಲ: ಸಿಎಂ ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಎಲೆಕ್ಷನ್‌ ಮುಗಿದಮೇಲೆ ಗ್ಯಾರೆಂಟಿ ಬಂದ್‌ ಆಗುತ್ತದೆ ಎಂದು ವಿಪಕ್ಷಗಳು ಹೇಳಬಹುದು ಆದರೆ ನಾನು ಹೇಳ್ತಿದ್ದೇನೆ ಕೇಳಿ ಯಾವ ಕಾರಣಕ್ಕೂ ಗ್ಯಾರೆಂಟಿ ಬಂದ್‌ ಮಾಡೋದಿಲ್ಲ ಎಂದು ಹೇಳಿದ್ದಾರೆ.

ಪಕ್ಷದ ರಾಷ್ಟ್ರೀಯ ನಾಯಕರು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ 25 ಗ್ಯಾರಂಟಿಗಳನ್ನು ನೀಡಿದ್ದಾರೆ ಮತ್ತು ಅಧಿಕಾರಕ್ಕೆ ಬಂದರೆ ಅವೆಲ್ಲವನ್ನು ಜಾರಿಗೆ ತರುತ್ತಾರೆ, ಕಾಂಗ್ರೆಸ್ ಯಾವತ್ತಿಗೂ ನುಡಿದಂತೆ ನಡೆಯುವ ಪಕ್ಷ. ಇದನ್ನು ನಾವು ಈಗಾಗಲೇ ಸಾಬೀತು ಮಾಡಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ನಾವು ನೀಡಿದ 5 ಗ್ಯಾರಂಟಿಗಳನ್ನು ಜಾರಿಗೆ ತರಲ್ಲ ಅಂತ ಬಿಜೆಪಿ ನಾಯಕರು ಪ್ರಚಾರ ಮಾಡುತ್ತಿದ್ದರು, ಅದರೆ ಅವುಗಳನ್ನು ನಮ್ಮ ಸರ್ಕಾರ ಜಾರಿಗೆ ತಂದಿತು. ಗ್ಯಾರಂಟಿ ಯೋಜನೆಗಳಿಂದ ಖಜಾನೆ ಖಾಲಿಯಾಗಿದೆ, ಹಾಗಾಗಿ ಅಭಿವೃದ್ಧಿ ಕಾರ್ಯಗಳು ನಿಂತು ಹೋಗಿವೆ ಅಂತಲೂ ಅಪಪ್ರಚಾರ ಮಾಡಿದರು. ಈಗ ಲೋಕಸಭಾ ಚುನಾವಣೆ ಬಳಿಕ ಗ್ಯಾರಂಟಿ ಯೋಜನೆಗಳು ನಿಂತು ಹೋಗುತ್ತವೆ ಅಂತ ಮತ್ತೇ ಅದೇ ಬಿಜೆಪಿ ನಾಯಕರು ಹೇಳುತ್ತಿದ್ದಾರೆ . ಆದರೆ ಅವರ ಮಾತಿಗೆ ಕಿವಿಕೊಡಬೇಡಿ. ನಮ್ಮ ಕೆಲಸ ನಾವು ಮಾಡುತ್ತೇವೆ. ನಮ್ಮ ಮೇಲೆ ಪ್ರೀತಿ ವಿಶ್ವಾಸ ತೋರಿಸಿ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!