VIRAL PHOTO| 1971ರಲ್ಲಿ ಮಸಾಲೆ ದೋಸೆ ಮತ್ತು ಒಂದು ಕಪ್ ಕಾಫಿಯ ಬೆಲೆ ಎಷ್ಟಿತ್ತು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರಸ್ತುತ ಒಂದು ಮಸಾಲೆ ದೋಸೆಯ ಬೆಲೆ ಎಷ್ಟು? ಒಂದು ಕಪ್ ಕಾಫಿಯ ಬೆಲೆ ಎಷ್ಟು? ಮಾಮೂಲಿ ಹೋಟೆಲ್‌ಗಳಲ್ಲಿ ಮಸಾಲೆದೋಸೆ ಬೆಲೆ 30ರಿಂದ 80 ರೂ. ಒಂದು ಕಪ್ ಕಾಫಿಯ ಬೆಲೆ 10 ರಿಂದ 30 ರೂ. ಆದರೆ, ರೆಸ್ಟೋರೆಂಟ್ ನಲ್ಲಿ ರೂ.1ಕ್ಕೆ ದೋಸೆ, ರೂ.1ಕ್ಕೆ ಕಾಫಿ ಸಿಕ್ಕರೆ? ಈಗಿನ ಕಾಲದಲ್ಲಿ ಇಷ್ಟು ಕಡಿಮೆ ಬೆಲೆಗೆ ಬಂದರೆ ಮನೆಗಳಲ್ಲಿ ಅಡುಗೆ ಮಾಡೋದು ಬಿಟ್ಟು ಹೋಟೇಲ್‌ ಮುಂದೆ ಕ್ಯೂ ಕಟ್ಟಿ ನಿಂತರೂ ಆಶ್ಚರ್ಯವಿಲ್ಲ. ಆದರೂ ನೀವು ನಂಬಲೇಬೇಕು ಒಂದು ಕಾಲದಲ್ಲಿ ದೇಶದಲ್ಲಿ ದೋಸೆ, ಇಡ್ಲಿ, ಉಪ್ಮಾ, ವಡಾ, ಕಾಫಿ, ಟೀ ಈ ಬೆಲೆಗೆ ಸಿಗುತ್ತಿತ್ತು.

70ರ ಆಸುಪಾಸಿನವರನ್ನು ಕೇಳಿದರೆ ಬಾಲ್ಯದಲ್ಲಿ ಒಂದು ರೂಪಾಯಿಗೆ ಸುಮಾರು ಪದಾರ್ಥ ಸಿಗುತ್ತಿತ್ತು ಎನ್ನುತ್ತಾರೆ. ಜೂನ್ 28, 1971 ರಂದು, ಮೋತಿ ಮಹಲ್ ಎಂಬ ರೆಸ್ಟೋರೆಂಟ್‌ನಲ್ಲಿ ವ್ಯಕ್ತಿಯೊಬ್ಬರು ದೋಸೆ ಮತ್ತು ಒಂದು ಕಪ್ ಕಾಫಿಯನ್ನು ಸೇವಿಸಿದರು ಮತ್ತು ಅವರಿಗೆ 10 ಪೈಸೆಯ ಸೇವಾ ಶುಲ್ಕದೊಂದಿಗೆ 2.10 ರೂ. ಬಿಲ್‌ ಮಾಡಿದ್ದಾರೆ.

ಆ ವ್ಯಕ್ತಿ ಇದರ ಬಿಲ್ ಅನ್ನು ಸುರಕ್ಷಿತವಾಗಿಟ್ಟಿದ್ದಾರೆ. ಇದೀಗ ಆ ಬಿಲ್‌ ವೈರಲ್‌ ಆಗಿದೆ. ಈ ಬಿಲ್ ಅನ್ನು ‘ಇಂಡಿಯನ್ ಹಿಸ್ಟರಿ ವಿತ್ ವಿಷ್ಣು ಶರ್ಮಾ’ ಎಂಬ ಟ್ವಿಟರ್ ಬಳಕೆದಾರರು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!