Monday, September 25, 2023

Latest Posts

ನಿದ್ದೆಯಲ್ಲೇ 160 ಕಿ.ಮೀ. ನಡೆದ ಬಾಲಕ, ಗಿನ್ನಿಸ್ ದಾಖಲೆ ಹಂಚಿಕೊಂಡಿದೆ ವಿಚಿತ್ರ ಕಥೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೆಲವರಿಗೆ ನಿದ್ರೆಯಲ್ಲಿ ನಡೆಯುವ ಅಭ್ಯಾಸವಿರುತ್ತದೆ. ನಿದ್ರೆ ಮಂಪರಿನಲ್ಲಿ ಮನೆಯಿಂದ ಹೊರಗೆ ಹೋದವರ ಬಗ್ಗೆಯೂ ಕೇಳಿರುತ್ತೀರಿ. ಆದರೆ, ಒಬ್ಬ ಬಾಲಕ ನಿದ್ದೆಯಲ್ಲೇ 160 ಕಿ.ಮೀ ನಡೆದಿದ್ದಾನೆ. 36 ವರ್ಷಗಳ ಹಿಂದೆ ನಡೆದ ಈ ವಿಚಿತ್ರ ಘಟನೆ ಇತ್ತೀಚೆಗಷ್ಟೇ ಗಿನ್ನೆಸ್ ವಿಶ್ವ ದಾಖಲೆಯಲ್ಲಿ ದಾಖಲಾಗಿದೆ.

ಏಪ್ರಿಲ್ 6, 1987 ರಂದು, 11 ವರ್ಷದ ಮೈಕೆಲ್ ಡಿಕ್ಸನ್ ಎಂಬ ಹುಡುಗನು ಅಮೇರಿಕಾ, ಇಂಡಿಯಾನಾದ ಪೆರುವಿನ ರೈಲು ಹಳಿಯಲ್ಲಿ ಅಲೆದಾಡುತ್ತಿದ್ದನು. ಬೂಟುಗಳಿಲ್ಲದೆ ಪೈಜಾಮ ಮಾತ್ರ ಧರಿಸಿದ್ದರು. ಬೆಳಗಿನ ಜಾವ 2.45ರ ವೇಳೆಗೆ ಆತನನ್ನು ಕಂಡ ರೈಲ್ವೆ ಸಿಬ್ಬಂದಿ ಮೈಕೆಲ್‌ನ ಅಸಹಜ ಸ್ಥಿತಿಯನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಅವರ ವಿಳಾಸವನ್ನು ಕೇಳಿದಾಗ, ಡಿಕ್ಸನ್ ಅವರು ಇಲಿನಾಯ್ಸ್‌ನ ಡ್ಯಾನ್‌ವಿಲ್ಲೆಯಿಂದ ಬಂದವರು ಎಂದು ಹೇಳಿದರು. ಡಿಕ್ಸನ್ ತನ್ನ ಮನೆಯ ಸಮೀಪವಿರುವ ನಿಲ್ದಾಣದಿಂದ ಗೂಡ್ಸ್ ರೈಲಿನಲ್ಲಿ ಮಧ್ಯರಾತ್ರಿ ಅಷ್ಟು ದೂರ ಪ್ರಯಾಣ ಮಾಡಿದ್ದನ್ನು ಕೇಳಿ ಅಧಿಕಾರಿಗಳೇ ದಂಗಾದರು. ಬಾಲಕನಿಗೆ ರೈಲನ್ನು ಹತ್ತಿ ಇಳಿದದ್ದು ನೆನಪಿಲ್ಲವಂತೆ. ಡಿಕ್ಸನ್ ನಿದ್ರೆಯಲ್ಲಿ ಪ್ರಯಾಣಿಸಿದರೂ, ಯಾವುದೇ ಅನಾಹುತವಾಗದೆ ಸುರಕ್ಷಿತವಾಗಿದ್ದಾರೆ.

ಡಿಕ್ಸನ್ ಅವರ ತಾಯಿಗೆ ತಕ್ಷಣ ಪೊಲೀಸರು ಆತನ ಇರುವಿಕೆಯ ಬಗ್ಗೆ ಮಾಹಿತಿ ನೀಡಿದರು. ಕೂಡಲೇ ಅವನನ್ನು ಕರೆದುಕೊಂಡು ಹೋಗಲು ಬಂದ ತಾಯಿ ಮಗನನ್ನು ಕಂಡು ಕಣ್ಣೀರಾಕಿದ್ದಾರೆ. ಮಗನಿಗೆ ನಿದ್ದೆಯಲ್ಲಿ ನಡೆಯುವ ಅಭ್ಯಾಸವಿದ್ದರೂ ಮನೆಯಿಂದ ಹೊರಬರುತ್ತಾನೆ ಅಂದಕೊಂಡಿರಲಿಲ್ಲ ಎಂದಿದ್ದಾರೆ.

ಗಿನ್ನೆಸ್ ವಿಶ್ವ ದಾಖಲೆ ಈ ವಿಚಿತ್ರ ಪ್ರಕರಣವನ್ನು ದಾಖಲಿಸಿದ್ದು ಮಾತ್ರವಲ್ಲದೆ ಈ ಕಥೆಯನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!