ಹೊಸದಿಗಂತ ಡಿಜಿಟಲ್ ಡೆಸ್ಕ್ :
ಗುಜರಾತ್ ಟೈಟನ್ಸ್ ಬೌಲಿಂಗ್ ದಾಳಿಗೆ ಪರದಾಡಿದ ಪಂಜಾಬ್ ಕಿಂಗ್ಸ್ 153 ರನ್ ಗಳಿಸಿ ಸವಾಲೊಡ್ಡಿದೆ.
ಪಂಜಾಬ್ ಪರ ಮ್ಯಾಥ್ಯೂ ಶಾರ್ಟ್ 36 ರನ್ ಬಾರಿಸಿದರು. ಉಳಿದ ಯಾವ ಬ್ಯಾಟರ್ಗಳಿಂದಲೂ ನಿರೀಕ್ಷಿತ ಪ್ರದರ್ಶನ ಕಂಡು ಬರಲಿಲ್ಲ.
ಟಾಸ್ ಸೋತು ಬ್ಯಾಟಿಂಗ್ಗೆಇಳಿದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 153 ರನ್ ಬಾರಿಸಿತು. ಎದುರಾಳಿ ಗುಜರಾತ್ ಗೆಲುವಿಗೆ 154 ರನ್ ಬಾರಿಸಬೇಕಿದೆ.
ಮೊಹಮ್ಮದ್ ಶಮಿ ಖಾತೆ ತೆರೆಯುವ ಮೊದಲೇ ಪ್ರಭ್ಶಿಮ್ರಾನ್ ಸಿಂಗ್ ವಿಕೆಟ್ ಬೇಟೆಯಾಡಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಕಳೆದ ಮೂರು ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ಮೂಲಕ ತಂಡಕ್ಕೆ ಆಸರೆಯಾಗಿದ್ದ ನಾಯಕ ಶಿಖರ್ ಧವನ್ ಅವರು ಈ ಪಂದ್ಯದಲ್ಲಿ ಕೇವಲ 8 ರನ್ಗೆ ಔಟಾದರು.
ಮ್ಯಾಥ್ಯೂ ಶಾರ್ಟ್ ವಿಕೆಟ್ ಪತನದ ಬಳಿಕ ತಂಡದ ಮೊತ್ತವೂ ಕುಂಡಿತವಾಗಿ ಸಾಗಿತು. ಜಿತೇಶ್ 25 ರನ್ ಗಳಿಸಿ ಮೋಹಿತ್ ಶರ್ಮ ಅವರಿಗೆ ವಿಕೆಟ್ ಒಪ್ಪಿಸಿದರು.ಆಲ್ರೌಂಡರ್ ಸ್ಯಾಮ್ ಕರನ್ 22, ಭನುಕಾ ರಾಜಪಕ್ಸೆ 20 ರನ್ ಬಾರಿಸಿದರು. ಅಂತಿಮ ಹಂತದಲ್ಲಿ ಶಾರುಖ್ ಖಾನ್ ಅವರು ಸಿಡಿದು ನಿಂತ ಪರಿಣಾಮ ತಂಡ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಅವರು 9 ಎಸೆತಕ್ಕೆ 22 ರನ್ ಗಳಿಸಿ ರನೌಟ್ ಸಂಕಟಕ್ಕೆ ಸಿಲುಕಿದರು.