ಗುಜರಾತ್ ಸೋಲಿನಿಂದ ಮತ್ತೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ: ಡಾ.ಎಚ್.ಕೆ.ಪಾಟೀಲ್

ಹೊಸದಿಗಂತ ವರದಿ, ಗದಗ:

ಗುಜರಾತನಲ್ಲಿ ನಮ್ಮ ನಿರೀಕ್ಷೆ ಗೆಲ್ಲುತ್ತೇವೆ, ಸರ್ಕಾರ ಮಾಡುತ್ತೆವೆ ಎಂದು ಇರಲಿಲ್ಲ ಆದರೆ, ಇಷ್ಟು ಕಡಿಮೆ ಮಟ್ಟದ ಪ್ರತಿಫಲ ದೊರಕುತ್ತದೆ, ಈ ರೀತಿಯ ಸೋಲಾಗುತ್ತದೆ ಎಂದು ಅನ್ನಿಸಿರಲಿಲ್ಲ. ಈ ಸೋಲು ಗಮನಿಸಿದಾಗ ಮತ್ತೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದೆನಿಸುತ್ತಿದೆ ಎಂದು ಶಾಸಕ ಡಾ. ಎಚ್.ಕೆ.ಪಾಟೀಲ ಅವರು ಹೇಳಿದರು.

ನಗರದ ಬಿಂಕದಕಟ್ಟಿಯ ಪ್ರಾಣಿ ಸಂಗ್ರಹಾಲಯದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಾಧ್ಯಮದಲ್ಲಿ ಕಾಂಗ್ರೇಸ್ಸಿಗೆ ೬೦ ರಿಂದ ೭೦ ಸ್ಥಾನಗಳು ಬರುತ್ತೆ ಎಂದು ಊಹಿಸಲಾಗಿತ್ತು. ಎಲ್ಲ ಲೆಕ್ಕಾಚಾರ ತಪ್ಪಾಗಲಿಕ್ಕೆ ಹೇಗೆ ಸಾದ್ಯ?. ಪ್ರಜಾಪ್ರಭುತ್ವದಲ್ಲಿ ವಿಶ್ವಾಸ ಇರುವವರು ಅವಲೋಕನೆ ಮಾಡಬೇಕಾಗಿದೆ. ಹಿಮಾಚಲ ಪ್ರದೇಶದಲ್ಲಿ ಮಾಧ್ಯಮದ ಸರ್ವೆ ಅಂದಾಜಿನ ಪ್ರಕಾರ ಇದೆ. ಗುಜರಾತ ಹಾಗೂ ಹಿಮಾಚಲ ಪ್ರದೇಶದ ಚುನಾವಣೆ ಎಫೆಕ್ಟ್ ರಾಜ್ಯದಲ್ಲಿ ಬೀಳುತ್ತೆ ಎಂದು ನಾನು ನಂಬಲ್ಲ.
ಗುಜರಾತ ಹಾಗೂ ಕರ್ನಾಟಕದಲ್ಲಿ ರಾಜಕೀಯ ಬೇರೆ ಇದೆ.
ಚುನಾವಣಾ ಆಯೋಗ ಈ ಬಗ್ಗೆ ಸ್ವಲ್ಪ ಮಟ್ಟಿಗಾದರೂ ಅವಲೋಕನ ಮಾಡಬೇಕು. ಗುಜರಾತನಲ್ಲಿ ಬಿಜೆಪಿ ಸತತವಾಗಿ ಗೆದ್ದಿದೆ. ಕಾನೂನಾತ್ಮಕವಾಗಿ ಹೇಗೆ ಸಾಧ್ಯವಾಗುತ್ತೆ ಎನ್ನುವುದು ಗೊತ್ತಿಲ್ಲ..
ಯಾವುದೇ ಸರ್ಕಾರದ ವಿರುದ್ಧ ವಿರೋಧ ಇಲ್ಲವಾದರೆ ಚುನಾವಣಾ ಆಯೋಗ ಪರಿಸ್ಥಿತಿಗೆ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಭಾವಿಸಬೇಕು. ಗುಜರಾತ ಚುನಾವಣೆಯ ಅಧ್ಯಯನ ಹಾಗೂ ವಿಶ್ಲೇಷಣೆ ಮಾಡಬೇಕು. ಇದು ಪ್ರಜಾಪ್ರಭುತ್ವದ ಒಳಿತಿಗೆ ಅಗತ್ಯವಾಗಿದೆ ಎಂದು ಶಾಸಕ ಡಾ. ಎಚ್.ಕೆ.ಪಾಟೀಲ ಅವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!