ಗುಜರಾತ್‌ ಚುನಾವಣೆ: ಮುನ್ನಡೆ ಸಾಧಿಸಿದ ಬಿಜೆಪಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
182 ಸದಸ್ಯ ಬಲದ ಗುಜರಾತ್ ವಿಧಾನಸಭೆಗೆ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು, ಎಎಪಿ ಪ್ರವೇಶದಿಂದಾಗಿ ಈ ಬಾರಿ ಚುನಾವಣೆ ಕಣ ರಂಗೇರಿದೆ.
ಕಳೆದ 27 ವರ್ಷಗಳಿಂದ ಬಿಜೆಪಿ ಗುಜರಾತ್‌ನಲ್ಲಿ ಅಧಿಕಾರದಲ್ಲಿದೆ. ಎಕ್ಸಿಟ್ ಪೋಲ್‌ಗಳನ್ನು ನಂಬುವುದಾದರೆ, ಗುಜರಾತ್‌ನಲ್ಲಿ ಬಿಜೆಪಿ ಸುಲಭವಾಗಿ ಗೆಲುವಿನ ಜಯಬೇರಿ ಬಾರಿಸಲಿದೆ. ಎಎಪಿ ಎರಡು ಅಂಕೆಗಳನ್ನು ಮೀರಿ ಹೋಗುವುದಿಲ್ಲ ಎಂದು ಭವಿಷ್ಯ ಹೇಳಿದೆ. ದೆಹಲಿ ಮುನ್ಸಿಪಾಲಿಟಿಯಲ್ಲಿ ಭರ್ಜರಿಯಾಗಿ ಗೆದ್ದಿರುವ ಎಎಪಿ ಗುಜರಾತ್‌ನಲ್ಲಿ ಅನಿರೀಕ್ಷಿತ ಫಲಿತಾಂಶಕ್ಕಾಗಿ ಎದುರು ನೋಡುತ್ತಿದೆ. 46 ಸ್ಥಾನಗಳಿಗೆ ಮತೆಣಿಕೆ ನಡೆದಿದ್ದು, ಬಿಜೆಪಿ 35, ಕಾಂಗ್ರೆಸ್ 10 ಮತ್ತು ಎಎಪಿ 1 ಮುನ್ನಡೆ ಸಾಧಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!