ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಗುಜರಾತ್ ವಿಧಾನಸಭೆಗೆ ಮೊದಲ ಹಂತದ ಮತದಾನ ನಡೆಯಲಿದೆ. ಒಟ್ಟಾರೆ ಸೌರಾಷ್ಟ್ರ, ಕಛ್, ದಕ್ಷಿಣ ಭಾಗ ಒಳಗೊಂಡ 19 ಜಿಲ್ಲೆಗಳಲ್ಲಿ 89 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ಇದೇ ಮೊದಲ ಬಾರಿಗೆ ಗುಜರಾತ್‌ನ ಆಫ್ರಿಕನ್ ಗ್ರಾಮ ಎಂದೇ ಹೆಸರಾದ ಬುಡಕಟ್ಟು ಹಳ್ಳಿಯ ಜನ ಮತದಾನ ಮಾಡಲಿದ್ದಾರೆ. ಜುನಾಗಡ್ ಜಿಲ್ಲೆಯ ಜಾಂಬೂರ್ ಎಂಬ ಹಳ್ಳಿ ಆಫ್ರಿಕನ್ ವಿಲೇಜ್ ಎಂದು ಖ್ಯಾತಿ ಪಡೆದಿದೆ. ಇಲ್ಲಿ ಆಫ್ರಿಕನ್ ಮೂಲದ ಬುಡಕಟ್ಟು ಸಮುದಾಯವಿದೆ.
ಈ ಸಮುದಾಯದ ಜನ ಇದೇ ಮೊದಲ ಬಾರಿಗೆ ತಮ್ಮ ಮತದಾನದ ಹಕ್ಕು ಚಲಾಯಿಸಲಿದ್ದಾರೆ.ಮತದಾನದ ಹಕ್ಕು ನೀಡಿರುವುದರಿಂದ ಜಾಂಬೂರ್ ಹಳ್ಳಿಗರು ಬುಧವಾರ ಇಡೀ ಗ್ರಾಮದಲ್ಲಿ ಸಂಭ್ರಮಾಚರಣೆ ನಡೆಸಿದ್ದಾರೆ.