ಗುಜರಾತ್​- ರಾಜಸ್ಥಾನ ನಡುವೆ ಪ್ಲೇ- ಆಫ್​ ಪಂದ್ಯ: ಗೆದ್ದ ತಂಡ ಫೈನಲ್​ಗೆ ಲಗ್ಗೆ!

ಹೊಸದಿಗಂತ ಜಿಜಿಟಲ್‌ ಡೆಸ್ಕ್‌:

ಐಪಿಎಲ್ ಇಂದಿನಿಂದ ಪ್ಲೇ – ಆಫ್​ ಪಂದ್ಯಗಳು ಶುರುವಾಗಿದ್ದು, ಮೊದಲ ಪಂದ್ಯದಲ್ಲಿ ಗುಜರಾತ್​ ಟೈಟನ್ಸ್​ ಹಾಗೂ ರಾಜಸ್ಥಾನ ರಾಯಲ್ಸ್​​ ಸೆಣಸಾಟ ನಡೆಸಲು ಸಜ್ಜಾಗಿವೆ. ಟಾಸ್​ ಗೆದ್ದ ಹಾರ್ದಿಕ್ ಪಾಂಡ್ಯ ತಂಡ ಬೌಲಿಂಗ್ ಆಯ್ದುಕೊಂಡಿದೆ. ಇಂದಿನ ಪಂದ್ಯದಲ್ಲಿ ಗೆಲುವು ದಾಖಲು ಮಾಡುವ ತಂಡ ನೇರವಾಗಿ ಫೈನಲ್​ಗೆ ಲಗ್ಗೆ ಹಾಕಲಿರುವ ಕಾರಣ, ಎರಡು ತಂಡಗಳಿಂದ ಭರ್ಜರಿ ಪೈಪೋಟಿ ಕಂಡು ಬರಲಿದೆ.
ಮಹತ್ವದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್​ ಯಾವುದೇ ರೀತಿಯ ಬದಲಾವಣೆ ಮಾಡಿಲ್ಲ. ಆದರೆ, ಗುಜರಾತ್​ ಟೈಟನ್ಸ್ ಮಾತ್ರ ಆಡುವ 11ರ ಬಳಗದಲ್ಲಿ ಕೇವಲ 1 ಬದಲಾವಣೆ ಮಾಡಿದ್ದು, ಲಕಿ ಫರ್ಗ್ಯುಸನ್​ ಸ್ಥಾನಕ್ಕೆ ಅಲ್ಜರಿ ಜೋಸೆಫ್​​ಗೆ ಮಣೆ ಹಾಕಿದೆ.

ರಾಜಸ್ಥಾನ ರಾಯಲ್ಸ್​​: ಯಶಸ್ವಿ ಜೈಸ್ವಾಲ್​, ಜೋಸ್ ಬಟ್ಲರ್​, ಸಂಜು ಸ್ಯಾಮ್ಸನ್​(ವಿ.ಕೀ, ಕ್ಯಾಪ್ಟನ್​), ದೇವದತ್​ ಪಡಿಕ್ಕಲ್​, ಆರ್​. ಅಶ್ವಿನ್​, ಶಿಮ್ರಾನ್ ಹೆಟ್ಮಾಯರ್​, ರಿಯಾಗ್ ಪರಾಗ್, ಟ್ರೆಂಟ್ ಬೌಲ್ಟ್​, ಪ್ರಸಿದ್ಧ್​ ಕೃಷ್ಣ, ಯಜುವೇಂದ್ರ ಚಹಲ್, ಒಬ್ಡೆ ಮ್ಯಾಕೆ

ಗುಜರಾತ್ ಟೈಟನ್ಸ್​​: ವೃದ್ಧಿಮಾನ್ ಸಾಹ(ವಿ.ಕೀ), ಶುಬ್ಮನ್ ಗಿಲ್​, ಮ್ಯಾಥ್ಯೂ ವೇಡ್​​, ಹಾರ್ದಿಕ್ ಪಾಂಡ್ಯ(ಕ್ಯಾಪ್ಟನ್), ಡೇವಿಡ್ ಮಿಲ್ಲರ್​, ರಾಹುಲ್ ತೆವಾಟಿಯಾ, ರಶೀದ್ ಖಾನ್​, ರವಿ ಶ್ರೀನಿವಾಸನ್​​ ಸಾಯಿ ಕಿಶೋರ್, ಯಶ್ ದಯಾಲ್​, ಅಲ್ಜರಿ ಜೋಸೆಫ್​, ಮೊಹಮ್ಮದ್ ಶಮಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!