ಗುಜರಾತ್ ಎರಡನೇ ಹಂತದ ಮತದಾನ: ಅಬ್ಬರದ ಪ್ರಚಾರಕ್ಕೆ ತೆರೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಗುಜರಾತ್ ವಿಧಾನಸಭೆಯ 2ನೇ ಹಂತದ ಚುನಾವಣೆಯ ಪ್ರಚಾರ ಇಂದು ಅಂತ್ಯವಾಗಲಿದೆ.

ಸೌರಾಷ್ಟ್ರ, ಕಚ್ ಮತ್ತು ದಕ್ಷಿಣ ಗುಜರಾತ್‌ನ 89 ಸ್ಥಾನಗಳಿಗೆ ಡಿಸೆಂಬರ್ 01 ರಂದು ಮತದಾನ ನಡೆದಿದ್ದು ಶೇ.63.31 ಮತದಾನ ನಡೆದಿದೆ. 2ನೇ ಹಂತದ ಮತದಾನ ಸೋಮವಾರ ನಡೆಯಲಿದೆ. 2ನೇ ಹಂತದಲ್ಲಿ 93 ಸ್ಥಾನಗಳಿಗೆ ಮತದಾನ ನಡೆಯಲಿದೆ.

ಬಿಜೆಪಿ (BJP), ಪ್ರತಿಪಕ್ಷ ಕಾಂಗ್ರೆಸ್ (Congress) ಮತ್ತು ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ (AAP) ಸೇರಿದಂತೆ ಸುಮಾರು 60 ರಾಜಕೀಯ ಪಕ್ಷಗಳ 833 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

2ನೇ ಹಂತದ ಮತದಾನದ ಭಾಗವಾಗಿರುವ 93 ವಿಧಾನಸಭಾ ಕ್ಷೇತ್ರಗಳು ಅಹಮದಾಬಾದ್, ವಡೋದರಾ ಮತ್ತು ಗಾಂಧಿನಗರ ಸೇರಿದಂತೆ ಉತ್ತರ ಮತ್ತು ಮಧ್ಯ ಗುಜರಾತ್‌ನ 14 ಜಿಲ್ಲೆಗಳ ವ್ಯಾಪ್ತಿಯಲ್ಲಿವೆ.
ಇಂದು ಪ್ರಧಾನಿ ಮೋದಿ ಸಹಿತ ಬಿಜೆಪಿ ಸ್ಟಾರ್ ಪ್ರಚಾರಕರು ಹಲವು ರೋಡ್‌ಶೋಗಳು ಮತ್ತು ಚುನಾವಣಾ ರ‍್ಯಾಲಿ ನಡೆಸಿ ಪ್ರಚಾರ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!