ಹೊಸದಿಗಂತ ಡಿಜಿಟಲ್ ಡೆಸ್ಕ್;
ಬಿಹಾರದಲ್ಲಿ ಕೇಂದ್ರ ಸಚಿವ ನಿತ್ಯಾನಂದ ರೈ ಅವರ ಇಬ್ಬರು ಸೋದರಳಿಯರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಓರ್ವ ಸಾವನ್ನಪ್ಪಿರುವ ಘಟನೆ ನಡೆದಿದೆ.
ನೀರಿಗಾಗಿ ಪರಸ್ಪರ ವಾಗ್ವಾದದಿಂದಾಗಿ ಎರಡೂ ಕಡೆಯಿಂದ ಗುಂಡಿನ ಚಕಮಕಿ ನಡೆಯಿತು. ವಿಶ್ವಜಿತ್ ಮತ್ತು ಜೈಜಿತ್ ಎಂಬ ಇಬ್ಬರು ಸಹೋದರರ ನಡುವೆ ಗುಂಡಿನ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯಲ್ಲಿ, ವಿಶ್ವಜಿತ್ ಗುಂಡೇಟಿನಿಂದ ಸಾವನ್ನಪ್ಪಿದರೆ, ಜೈಜೀತ್ ಮತ್ತು ತಾಯಿ ಹಿನಾ ದೇವಿ ಗಾಯಗೊಂಡಿದ್ದಾರೆ. ಇಬ್ಬರನ್ನೂ ಭಾಗಲ್ಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತ ವಿಶ್ವಜಿತ್ ಮತ್ತು ಜಯಜಿತ್ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರ ಸೋದರಳಿಯರು. ಅವರ ತಾಯಿ ಹೀನಾ ದೇವಿಯ ಕೈಗೆ ಗುಂಡು ತಗುಲಿತ್ತು.
ಮಾಹಿತಿಯ ಪ್ರಕಾರ, ಮೃತ ವಿಶ್ವಜೀತ್ ಯಾದವ್ ಮತ್ತು ಜೈಜೀತ್ ಯಾದವ್ ಇಬ್ಬರೂ ನವಗಚಿಯಾದ ಜಗತ್ಪುರ ಗ್ರಾಮದಲ್ಲಿ ಒಂದೇ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು. ವಿಶ್ವಜೀತ್ ಹಿರಿಯನಾಗಿದ್ದನು ಮತ್ತು ಜೈಜೀತ್ ಕಿರಿಯನಾಗಿದ್ದನು. ಇಬ್ಬರೂ ಕೃಷಿಯ ಮೂಲಕ ಜೀವನ ಸಾಗಿಸುತ್ತಿದ್ದರು.
ನಲ್ಲಿ ನೀರಿನ ವಿಚಾರದಲ್ಲಿ ಇಬ್ಬರ ನಡುವೆ ಜಗಳವಾಗಿದೆ.ಬಳಿಕ ಆ ಜಗಳ ತಾರಕಕ್ಕೇರಿತ್ತು, ಜೈಜೀತ್ ವಿಶ್ವಜೀತ್ ಮೇಲೆ ಗುಂಡು ಹಾರಿಸಿದ್ದಾರೆ, ಗಾಯಗೊಂಡ ವಿಶ್ವಜೀತ್ ಕೂಡ ಗುಂಡು ಹಾರಿಸುವ ಮೂಲಕ ಪ್ರತಿದಾಳಿ ನಡೆಸಿದ್ದರು. ಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ವಿಶ್ವಜೀತ್ ಸಾವನ್ನಪ್ಪಿದರೆ, ಜೈಜೀತ್ ಗಂಭೀರವಾಗಿ ಗಾಯಗೊಂಡಿದ್ದಾರೆ.