ಹೊಸದಿಗಂತ ಡಿಜಿಟಲ್ ಡೆಸ್ಕ್;
ವಿಧಾನಸಭೆಯಲ್ಲಿ ಇಂದು ಹನಿಟ್ರ್ಯಾಪ್ ವಿಷಯ ಪ್ರತಿದ್ವನಿಸಿದ್ದು, ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರಿಗೆ ಹನಿಟ್ರ್ಯಾಪ್ ಮಾಡಲಾಗಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.
ವಿಧಾನಸಭೆಯಲ್ಲಿ ಹನಿ ಟ್ರ್ಯಾಪ್ ಕುರಿತು ಗಂಭೀರವಾಗಿ ಚರ್ಚೆ ನಡೆಯಿತು. ಈ ವೇಳೆ ವಿಜಯಪುರ ನಗರ ಬಿಜೆಪಿ ಶಾಸಕ ಯತ್ನಾಳ್ ಸಹಕಾರ ಸಚಿವರಿಗೆ ಹನಿ ಟ್ರ್ಯಾಕ್ ಮಾಡಲಾಗಿದೆ ಎಂದು ಹೇಳಿಕೆ ನೀಡಿದರು.
ಬಳಿಕ ಹನಿಟ್ರ್ಯಾಪ್ ಬಗ್ಗೆ ವಿಧಾನಸಭೆಯಲ್ಲಿ ಸಚಿವ ಕೆ ಏನ್ ರಾಜಣ್ಣ ಪ್ರಸ್ತಾಪಿಸಿದರು. ಗೃಹ ಸಚಿವರಿಗೆ ಈ ಕುರಿತು ನಾನು ಲಿಖಿತ ದೂರು ಕೊಡುತ್ತೇನೆ. ಗೃಹ ಸಚಿವರು ವಿಶೇಷ ತನಿಖೆ ಮಾಡಿಸಲಿ. ಇದರ ಹಿಂದಿರುವ ನಿರ್ದೇಶಕರು ಯಾರು ಎಂದು ಗೊತ್ತಾಗಲಿ, ನೆಪ ಮಾತ್ರಕ್ಕೆ ತನಿಖೆ ಎಂದು ಹೇಳುವುದು ಬೇಡ ಎಂದು ತಿಳಿಸಿದರು.