ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದ ಉಧಮ್‌ಪುರದ ಬಸಂತ್‌ಗಢ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿದೆ.
ದಾಳಿ ವೇಳೆ ಜೈಶ್-ಎ-ಮೊಹಮ್ಮದ್‌ನ ನಾಲ್ವರು ಭಯೋತ್ಪಾದಕರು ಶಸ್ತ್ರಾಸ್ತ್ರಗಳೊಂದಿಗೆ ಸಿಕ್ಕಿಬಿದ್ದಿದ್ದಾರೆ ಎಂದು ವರದಿಯಾಗಿದೆ.
ಕಥುವಾ-ಬಸಂತ್ಗಢ ಗಡಿಯಲ್ಲಿ ನಿರ್ದಿಷ್ಟ ಗುಪ್ತಚರ ಮತ್ತು ಭಯೋತ್ಪಾದಕರೊಂದಿಗಿನ ಸಂಪರ್ಕದ ಆಧಾರದ ಮೇಲೆ ಕಥುವಾದಲ್ಲಿ ಜಂಟಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.
ಜಮ್ಮುವಿನ ಅಖ್ನೂರ್ ಸೆಕ್ಟರ್‌ನಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಪಾಕಿಸ್ತಾನಿ ರೇಂಜರ್‌ಗಳು ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧ ಗಾಯಗೊಂಡ ಗಂಟೆಗಳ ನಂತರ ಎನ್‌ಕೌಂಟರ್ ನಡೆದಿದೆ. ಸದ್ಯ ಕದನ ವಿರಾಮ ಉಲ್ಲಂಘನೆಯ ನಂತರ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಸ್ಥಳಿಯ ಮಾಧ್ಯಮ ವರದಿ ಮಾಡಿದೆ.