ಮಣಿಪುರದಲ್ಲಿ ಮತ್ತೆ ಗುಂಡಿನ ಸದ್ದು: ದಾಳಿಯಲ್ಲಿ ವ್ಯಕ್ತಿ ಸಾವು, ಏಳು ಮಂದಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಣಿಪುರದ ಬಿಷ್ಣುಪುರ್ ಜಿಲ್ಲೆಯಲ್ಲಿ ಮತ್ತೆ ಗುಂಡಿನ ಸದ್ದು ಕೇಳಿದ್ದು, ಶಂಕಿತ ಕುಕಿ ಬಂಡುಕೋರರು ನಡೆಸಿದ ದಾಳಿಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ. ಮೈತೇಯಿ ಸಮುದಾಯದ ಇಬ್ಬರು ರೈತರು ಸೇರಿದಂತೆ ಏಳು ಮಂದಿಗೆ ಗಾಯಗಳಾಗಿವೆ.

ಇಂದು ಬೆಳಗ್ಗೆ ನಡೆದ ಬಂಡುಕೋರರ ಗುಂಡಿನ ದಾಳಿಯಲ್ಲಿ 27 ವರ್ಷದ ವ್ಯಕ್ತಿಯೊಬ್ಬ ಗಾಯಗೊಂಡಿದ್ದರು.ಅವರು ಸಂಜೆ ಇಂಫಾಲ್‌ನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇಂಫಾಲ್ ಕಣಿವೆಯಿಂದ ಕುಕಿ ಪ್ರಾಬಲ್ಯದ ಬೆಟ್ಟಗಳನ್ನು ಬೇರ್ಪಡಿಸುವ ಬಫರ್ ವಲಯದ ಸಮೀಪದಲ್ಲಿ ಈ ಘಟನೆ ನಡೆದಿದೆ

ಶಂಕಿತ ಕುಕಿ ದಂಗೆಕೋರರು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಮೈತೇಯಿ ರೈತರು ಮೊದಲು ಗಾಯಗೊಂಡರು. ನಂತರ ಅವರನ್ನು ಇಂಫಾಲ್‌ನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು.ನಂತರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುಂಡಿನ ದಾಳಿಯ ಹೆಚ್ಚಿನ ಘಟನೆಗಳು ವರದಿಯಾಗಿವೆ. ಇದರಲ್ಲಿ ಕನಿಷ್ಠ ಆರು ಮೈತೇಯಿ ಗ್ರಾಮ ಸ್ವಯಂಸೇವಕರಿಗೆ ಬುಲೆಟ್ ಗಾಯಗಳಾಗಿವೆ .
ಈ ಘಟನೆಯ ಬಳಿಕ ಭದ್ರತಾ ಪಡೆಗಳು ತಕ್ಷಣವೇ ಕಾರ್ಯಾಚರಣೆಗೆ ಇಳಿದಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!