ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ(Aligarh Muslim University)ದ ಆವರಣದಲ್ಲಿ ಗುಂಡಿನ ದಾಳಿ ನಡೆದಿದ್ದು, ಮೂವರು ಗಾಯಗೊಂಡಿದ್ದಾರೆ.
ಬ್ಯಾಚುಲರ್ ಆಫ್ ಯುನಾನಿ ಮೆಡಿಸಿನ್ ಸೈನ್ಸ್(ಬಿಯುಎಂಎಸ್)ನ ಹಳೆಯ ವಿದ್ಯಾರ್ಥಿಗಳು ಹಾಗೂ ಇತರೆ ವಿದ್ಯಾರ್ಥಿಗಳ ನಡುವೆ ಘಟನೆ ನಡೆದಿದೆ. ಇತರೆ 11 ಅಪರಿಚಿತ ವ್ಯಕ್ತಿಗಳು ಕೂಡ ಭಾಗಿಯಾಗಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಸೋಮವಾರ ಮಧ್ಯರಾತ್ರಿ ಗುಂಡಿನ ದಾಳಿ ನಡೆದಿದೆ, ಹಳೆಯ ವಿದ್ಯಾರ್ಥಿ ಸಾದಿಕ್ ಹಸನ್ ಮತ್ತು ಇತರೆ ಇಬ್ಬರು ವಿದ್ಯಾರ್ಥಿಗಳಾದ ಫಿರೋಜ್ ಮತ್ತು ಅಬ್ದುಲ್ಲಾ ಅವರನ್ನು ಬಿಎಂ ಹಾಲ್ನಿಂದ ಸರ್ ಸೈಯದ್ ಹಾಲ್ಗೆ ಹಸ್ತಾಂತರಿಸಲಾಗಿದೆ. ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯ ಎಎಂಯು ಕ್ಯಾಂಪಸ್‌ನಲ್ಲಿ ನಡೆದ ಗುಂಡಿನ ದಾಳಿಯನ್ನು ದೃಢಪಡಿಸಿದ್ದಾರೆ.
ರಾತ್ರಿ 11 ಗಂಟೆ ಸುಮಾರಿಗೆ ಕೆಲವು ವಿದ್ಯಾರ್ಥಿಗಳು ಎಎಂಯುನ ವಿಎಂ ಹಾಲ್ ಬಳಿ ಕುಳಿತಿದ್ದರು. ಆಗ ಒಂದು ಗುಂಪಿನಿಂದ ಕೆಲವರು ಅಲ್ಲಿಗೆ ಬಂದು ಗುಂಡು ಹಾರಿಸತೊಡಗಿದರು. ಈ ಜನರೆಲ್ಲ ಮುಖ ಮುಚ್ಚಿಕೊಂಡಿದ್ದರು. ಬಳಿಕ ಕ್ಯಾಂಪಸ್‌ನಲ್ಲಿ ನೂಕುನುಗ್ಗಲು ಉಂಟಾಯಿತು. ಇದಾದ ನಂತರ ಬೇರೆ ಬೇರೆ ಗುಂಪಿನವರೂ ಅಲ್ಲಿಗೆ ಆಗಮಿಸಿದ್ದು, ಜಗಳ ತಾರಕಕ್ಕೇರಿದೆ.